ಮುಂಬೈ:ನೋಟು ಮುದ್ರಣ ಮಾಡಿ ಜನರ ಕೈಗೆ ತಲುಪಿಸುವಂತೆ ವಿರೋಧ ಪಕ್ಷದ ಮುಖಂಡರು, ವಿತ್ತ ತಜ್ಞರು, ರಾಜಕೀಯ ಮುಖಂಡರು, ಬ್ಯಾಂಕ್ರಗಳು ನೀಡಿದ ಸಲಹೆಗೆ ಕೇಂದ್ರೀಯ ಬ್ಯಾಂಕ್ ತನ್ನ ಸ್ಪಷ್ಟನೆ ಹೊರಹಾಕಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್, ಈ ಸಮಯದಲ್ಲಿ ಇದೊಂದು ಬಹಳ ಕಾಲ್ಪನಿಕ ಪ್ರಶ್ನೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್ಥಿಕತೆ ಬೆಂಬಲಿಸಲು ಕೊರತೆಯ ಹಣಕಾಸು ಮಾರ್ಗ ಆಯ್ದುಕೊಳ್ಳುವ ಬಗ್ಗೆ ಆರ್‌ಬಿಐನ ಅಭಿಪ್ರಾಯಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದಾಸ್, 'ನೋಟುಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯಾಂಕ್ ತಮ್ಮದೇ ಆದ ಮಾದರಿಗಳು ಮತ್ತು ಮೌಲ್ಯಮಾಪನ ಹೊಂದಿದೆ. ಆರ್‌ಬಿಐ ಹಲವು ಸಂಕೀರ್ಣ ಅಂಶಗಳನ್ನು ಆಧರಿಸಿ ಆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಹಣಕಾಸಿನ ಸ್ಥಿರತೆ, ಹಣದುಬ್ಬರದ ಮಟ್ಟ, ವಿನಿಮಯ ದರಗಳ ಸ್ಥಿರತೆಯಂತಹ ಇತ್ಯಾದಿಗಳಿಗೆ ಸಂಬಂಧಿಸಿದೆ ಅಂಶವಾಗಿದೆ' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.