ನವದೆಹಲಿ: ಚೀನಾ ಮೂಲದ ಟಿಕ್‌ಟಾಕ್ ಭಾರತದಲ್ಲಿ ನಿಷೇಧವಾದ ಬಳಿಕ ದೇಶಿ ಅಪ್ಲಿಕೇಶನ್‌ಗಳ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. 2020ರ ಜೂನ್‌ನಿಂದ ಮಾಸಿಕ ಸಕ್ರಿಯ ಬಳಕೆದಾರರು (ಎಂಎಯು) 1.37 ಪಟ್ಟು ಮತ್ತು ದೈನಂದಿನ ಸಕ್ರಿಯ ಬಳಕೆದಾರರು 1.1 ಪಟ್ಟು ಶಾರ್ಟ್-ಫಾರ್ಮ್ ಕಂಟೆಂಟ್ ಬೆಳೆದಿದೆ ಎಂದು ರೆಡ್‌ಸೀರ್ ಕನ್ಸಲ್ಟಿಂಗ್ ವರದಿ ಹೇಳಿದೆ.
ಟಿಕ್‌ಟಾಕ್ ನಿಷೇಧದ ಹೊರತಾಗಿಯೂ ದೇಶೀಯ ಅಪ್ಲಿಕೇಶನ್‌ಗಳು ಕಳೆದ ಒಂದು ವರ್ಷದಲ್ಲಿ ಗಮನಾರ್ಹವಾಗಿ ಬೆಳೆದಿವೆ. ಕಿರು - ರೂಪದ ವಿಡಿಯೋ ತನ್ನ ಬೆಳವಣಿಗೆಯ ಪ್ರಯಾಣ ಮುಂದುವರೆಸಿದೆ. ದೇಶದ ಅಗ್ರ 50 ನಗರಗಳನ್ನು ಹೊರತುಪಡಿಸಿದ ಇತರ ಪ್ರದೇಶಗಳಲ್ಲಿ ನಿರಂತರವಾಗಿ ಬಳಕೆದಾರರ ಹೆಚ್ಚಳವನ್ನು ತೋರಿಸುತ್ತದೆ. ಪ್ರಸ್ತುತ ಶೇ.9 ರಷ್ಟು ಒಟ್ಟಾರೆ ವಿಷಯ ಬಳಕೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
ಜಾಗತಿಕ ಸಾಮಾಜಿಕ ಮಾಧ್ಯಮವು ಅಗ್ರ 50 ನಗರಗಳಲ್ಲಿ ಪ್ರಾಬಲ್ಯ ಹೊಂದಿದ್ದರೂ, ಭಾರತೀಯ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಕಿರು - ರೂಪದ ವಿಡಿಯೋ ಪ್ಲಾಟ್‌ಫಾರ್ಮ್‌ಗಳು ಹೂಡಿಕೆಯ ಮೇಲಿನ ಲಾಭದ ಬಹುಪಾಲು ಪಾಲು ಪಡೆಯುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಒಟ್ಟಾರೆ ಸಮಯ ಕಳೆದ ಬೆಳವಣಿಗೆಯು ಶೇ.8 ರಷ್ಟಾಗಿದೆ. ಸಾಮಾಜಿಕ ಮಾಧ್ಯಮವಲ್ಲದ (ಶಾರ್ಟ್-ಫಾರ್ಮ್ ವಿಡಿಯೋ) ಸಮಯವು ಶೇ.57 ರಷ್ಟು ಬೆಳೆದಿದೆ. ಇದು ಸಾಮಾಜಿಕ ಮಾಧ್ಯಮ ಸೇವನೆಯಿಂದ ಸಣ್ಣ ರೂಪದ ವಿಡಿಯೋಗಳಿಗೆ ಇರುವ ಬದಲಾವಣೆ ಸೂಚಿಸುತ್ತದೆ.