ಕರ್ನಾಟಕ

karnataka

ETV Bharat / business

ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!

ಪಾಲಿಸಿಬಜಾರ್‌ ಷೇರು ನಿನ್ನೆ ಕೇವಲ 0.8 ಶೇಕಡಾ ಕುಸಿದು 771.25 ರೂ.ಗೆ ವಹಿವಾಟು ನಡೆಸಿತು. ಆದರೆ ಇದೇ ಷೇರುಗಳ ಬೆಲೆ ಸೋಮವಾರ, ಇದು ಶೇಕಡಾ 10ರಷ್ಟು ಕುಸಿತ ಕಂಡಿದ್ದವು. ಇನ್ನು ಇತ್ತೀಚೆಗಷ್ಟೇ ಷೇರು ಮಾರುಕಟ್ಟೆ ಪ್ರವೇಶಿಸಿರುವ ನೈಕಾ ಷೇರು ಮಂಗಳವಾರವೂ ಶೇ 4 ರಷ್ಟು ಕುಸಿತ ಕಂಡು 1167 ರೂಗಳಲ್ಲಿ ದಿನದ ವಹಿವಾಟು ಮುಗಿಸಿತು.

ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!
ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!

By

Published : Jan 26, 2022, 6:50 AM IST

ನವದೆಹಲಿ:ನವೋದ್ಯಮದ ಸಂಸ್ಥೆಗಳಾದ ಪಾಲಿಸಿಬಜಾರ್ ಮತ್ತು ನೈಕಾ ಷೇರುಗಳು ಮಂಗಳವಾರದ ವಹಿವಾಟಿನಲ್ಲೂ ಕುಸಿತ ಅನುಭವಿಸಿದವು. ಆದರೆ ಈ ಹಿಂದೆ ಆದ ಭಾರಿ ನಷ್ಟದಿಂದ ಚೇತರಿಕೆ ಕಾಣುವಲ್ಲಿಯೂ ಈ ಷೇರುಗಳು ಯಶಸ್ವಿಯಾದವು.

ಈ ಕಂಪನಿಗಳು ಕಡಿಮೆ ಮೌಲ್ಯವನ್ನು ಹೊಂದಿರುವುದರಿಂದ ವ್ಯವಹಾರದಲ್ಲಿ ಈ ಷೇರುಗಳ ಕುಸಿತಕ್ಕೆ ಪ್ರಮುಖ ಕಾರಣ ಎಂಬುದು ವಿಶ್ಲೇಷಕರ ಮಾತಾಗಿದೆ. ಪಾಲಿಸಿಬಜಾರ್‌ ಷೇರುಗಳು ನಿನ್ನೆ ಕೇವಲ 0.8 ಶೇಕಡಾ ಕುಸಿದು 771.25 ರೂ.ಗೆ ವಹಿವಾಟು ನಡೆಸಿತು. ಆದರೆ ಇದೇ ಷೇರುಗಳ ಬೆಲೆ ಸೋಮವಾರ, ಇದು ಶೇಕಡಾ 10ರಷ್ಟು ಕುಸಿತ ಕಂಡಿದ್ದವು. ಇನ್ನು ಇತ್ತೀಚೆಗಷ್ಟೇ ಷೇರು ಮಾರುಕಟ್ಟೆ ಪ್ರವೇಶಿಸಿರುವ ನೈಕಾ ಷೇರು ಮಂಗಳವಾರವೂ ಶೇ 4 ರಷ್ಟು ಕುಸಿತ ಕಂಡು 1167 ರೂಗಳಲ್ಲಿ ದಿನದ ವಹಿವಾಟು ಮುಗಿಸಿತು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದೇ ಷೇರು ಸೋಮವಾರ ಶೇ 12.7 ರಷ್ಟು ಕುಸಿತ ಕಂಡು ಭಾರಿ ನಷ್ಟ ಅನುಭವಿಸಿತ್ತು. ಮಂಗಳವಾರ ತುಸು ಚೇತರಿಕೆ ಕಾಣುವ ಮೂಲಕ ಸೋಮವಾರದ ನಷ್ಟವನ್ನು ಸರಿ ತೂಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ:ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ.. ಯಾರಿಗೆ ಶುಭ, ಲಾಭ?

ABOUT THE AUTHOR

...view details