ಮುಂಬೈ:ಕೇಂದ್ರ ಸಚಿವರುಗಳ ತಂಡದ (ಜಿಒಎಂ) ಮುಖ್ಯಸ್ಥ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎರಡನೇ ಸಭೆ ಇಂದು ನಡೆಯಲಿದೆ.
ಸಭೆಯಲ್ಲಿ ಏರ್ ಇಂಡಿಯಾ ಮಾರಾಟದ ಪ್ರಾಥಮಿಕ ಮಾಹಿತಿ ಜ್ಞಾಪನದ ಬಗ್ಗೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಸ್ಪೇಸಿಫಿಕ್ ಅಲ್ಟರ್ನೆಟಿವ್ ಮೆಕ್ಯಾನಿಸಮ್ (ಎಐಎಸ್ಎಎಂ) ಅಥವಾ ಜಿಒಎಂ ಈಗಾಗಲೇ ರಾಷ್ಟ್ರೀಯ ವಾಹಕ ಏರ್ ಇಂಡಿಯಾದಲ್ಲಿನ ಶೇ 100ರಷ್ಟು ಷೇರುಗಳ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಇದುವರೆಗೂ ಯಾವುದೇ ಸಂಸ್ಥೆಯು ಖರೀದಿಗೆ ಆಸಕ್ತಿವಹಿಸಿ ಮುಂದೆ ಬಂದಿಲ್ಲ.
ಜಿಒಎಂನ ಎರಡನೇ ಸಭೆಯು ಮಂಗಳವಾರ ನಡೆಯುವುದರಿಂದ ಮಾರಾಟ ಪ್ರಕ್ರಿಯೆಯು ಚುರುಕುಗೊಳ್ಳಬಹುದು. ಮಾರಾಟ ಪ್ರಕ್ರಿಯೆಯ ಪ್ರಾಥಮಿಕ ಮಾಹಿತಿಯ ಜ್ಞಾಪನ ಸಹ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.