ಮುಂಬೈ: ಕಳೆದ ಕೆಲದಿನಗಳ ಹಿಂದೆಯಷ್ಟೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಮುಂಬೈ ಷೇರುಪೇಟೆ ಕಳೆದೆರಡು ವಹಿವಾಟಿನಿಂದ ಕುಸಿತ ಅನುಭವಿಸುತ್ತಿದೆ. ಇಂದೂ ಸಹ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 100 ಅಂಕ ಹಾಗೂ ಬಿಎಸ್‌ಇ ಸೆನ್ಸೆಕ್ಸ್ ಕುಸಿತಕಂಡಿದೆ.
ಏಷ್ಯನ್ ಮಾರ್ಕೆಟ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಹೆಚ್ಡಿಎಫ್ಸಿ ನೆಗೆಟಿವ್ ಟ್ರೆಂಡ್ನಲ್ಲಿವೆ. ಹೀಗಾಗಿ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕವು 130.18 ಅಥವಾ ಶೇ.0.22ರಷ್ಟು ಕುಸಿತ ಕಂಡು 59,937.44 ಅಂಕಗೊಳೊಂದಿಗೆ ವಹಿವಾಟು ನಡೆಸುತ್ತಿದೆ. ಜೊತೆಗೆ ನಿಫ್ಟಿ 25.80 ಅಂಕ ಅಥವಾ ಶೇ.0.14ರಷ್ಟು ಕುಸಿತ ಕಂಡು 17,891ರಷ್ಟಕ್ಕೆ ತಲುಪಿದೆ.
ವಹಿವಾಟು ಆರಂಭದಲ್ಲಿ ಇಂಡಸ್ಇಂಡ್ ಬ್ಯಾಂಕ್ ಅತೀ ಹೆಚ್ಚಿನ ನಷ್ಟ ಅನುಭವಿಸಿದೆ. ಸುಮಾರು ಶೇ.9ರಷ್ಟು ಒಟ್ಟಾರೆ ನಷ್ಟದಲ್ಲಿ ಭಾಗಿಯಾಗಿದೆ. ಇದಾದ ಬಳಿಕ ನಷ್ಟದ ಸಾಲಿನಲ್ಲಿ ಏಷ್ಯನ್ ಪೇಯಿಂಟ್ಸ್, ಸನ್ ಫಾರ್ಮಾ, ಎಂ&ಎಂ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ ಸ್ಥಾನ ಪಡೆದಿವೆ.