ಮುಂಬೈ:ಏಷ್ಯನ್ ಮಾರುಕಟ್ಟೆಗಳ ಏರಿಳಿತಗಳ ನಡುವೆ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 335 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಲಾಭ ಗಳಿಸಿವೆ.
ಬಿಎಸ್‌ಇ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 335.30 ಪಾಯಿಂಟ್‌ಗಳು ಅಥವಾ ಶೇಕಡಾ 0.56ರಷ್ಟು ಏರಿಕೆಯಾಗಿ 59,937.14 ಪಾಯಿಂಟ್ಗಳಲ್ಲಿ ವಹಿವಾಟು ನಡೆಸುತ್ತಿದೆ. ಅದರ ಜೊತೆಗೆ ನಿಫ್ಟಿ 101.80 ಪಾಯಿಂಟ್‌ಗಳು ಅಥವಾ ಶೇಕಡಾ 0.57 ರಷ್ಟು ಏರಿಕೆ ಕಂಡಿದ್ದು, 17,847.70 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್ನಲ್ಲಿ ಟೈಟಾನ್ ಅತಿ ಹೆಚ್ಚು ಗಳಿಕೆ ಕಂಡಿದ್ದು, ಇದರ ಬೆಳವಣಿಗೆ ಶೇಕಡಾ 3ಕ್ಕೆ ಏರಿಕೆಯಾಗಿದೆ. ಟೈಟಾನ್ ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್, ಪವರ್‌ಗ್ರಿಡ್, ಕೋಟಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ಗಳಿವೆ. ಮತ್ತೊಂದೆಡೆ, ಎಚ್‌ಡಿಎಫ್‌ಸಿ ಲಿಮಿಟೆಡ್ , ಇನ್ಫೋಸಿಸ್, ಡಾ.ರೆಡ್ಡೀಸ್, ಎಂ ಆ್ಯಂಡ್ ಎಂ ಮತ್ತು ಮಾರುತಿ ಕಂಪನಿಗಳು ಲಾಭ ಗಳಿಕೆಯಲ್ಲಿ ಹಿಂದುಳಿದಿವೆ.