ಮುಂಬೈ:ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್ಗಳಾದ ಎಚ್‌ಡಿಎಫ್‌ಸಿ ಟ್ವಿನ್ಸ್, ಕೊಟಾಕ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳಿಕೆಗಳಿಂದಾಗಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ ಜೀವಿತಾವಧಿಯ ಗರಿಷ್ಠ 52,516.76 ಅಂಕಗಳಿಗೆ ತಲುಪಿದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು 322.33 ಅಂಕ ಅಥವಾ ಶೇ 0.62ರಷ್ಟು ಹೆಚ್ಚಳವಾಗಿ 52,476.46 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 108.40 ಅಂಕ ಅಥವಾ ಶೇ 0.71ರಷ್ಟು ಏರಿಕೆ ಕಂಡು15,423.10ಕ್ಕೆ ತಲುಪಿದೆ. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಒಎನ್‌ಜಿಸಿ ಶೇ 4ರಷ್ಟು ಏರಿಕೆ ಕಂಡಿದ್ದು, ಇಂಡಸ್ಇಂಡ್ ಬ್ಯಾಂಕ್, ಕೊಟಾಕ್ ಬ್ಯಾಂಕ್, ಪವರ್‌ಗ್ರಿಡ್, ಎಸ್‌ಬಿಐ ಮತ್ತು ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ.