ಮುಂಬೈ:ಭಾರತದಲ್ಲಿ ವಿವಿಧ ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರಿರುವ ಮಹಾಮಾರಿ ಕೊರೊನಾ, ಮುಂಬೈ ಷೇರು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ, ಭಾರಿ ಪೆಟ್ಟು ನೀಡುತ್ತಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚು 2,73,810 ಕೋವಿಡ್ ಕೇಸ್ಗಳು ದೇಶದಲ್ಲಿ ವರದಿಯಾಗುತ್ತಿದ್ದಂತೆಯೇ ಬಿಎಸ್ಇ ಮತ್ತು ಎನ್ಎಸ್ಇ ಈಕ್ವಿಟಿ ಸಂವೇದಿ ಸೂಚ್ಯಂಕಗಳಲ್ಲಿ ಶೇ.2ರಷ್ಟು ಇಳಿಕೆ ಕಂಡುಬಂದಿದೆ.
1211.97 ಪಾಯಿಂಟ್ ಸೆನ್ಸೆಕ್ಸ್ ಇಳಿಕೆ ಕಂಡಿದ್ದು, ಸದ್ಯ 47,620.06 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. 356.55 ಪಾಯಿಂಟ್ ಕುಸಿತದೊಂದಿಗೆ ನಿಫ್ಟಿ 14,475.10 ಅಂಕಗಳಿಗೆ ಇಳಿಕೆಯಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಸುನಾಮಿ: ಹೊಸದಾಗಿ 2.73 ಲಕ್ಷ ಕೇಸ್ ಪತ್ತೆ, 1,619 ಮಂದಿ ಬಲಿ
ಶೇ.5ರಷ್ಟು ನಷ್ಟವನ್ನು ಇಂಡಸ್ಇಂಡ್ ಬ್ಯಾಂಕ್ ಅನುಭವಿಸಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಆಟೋ, ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ತಲಾ ಶೇ.4ರಷ್ಟು ನಷ್ಟಕ್ಕೆ ಒಳಗಾಗಿವೆ.