ಮುಂಬೈ :ಪೂರ್ವ ಯುರೋಪ್ನಲ್ಲಿ ಯುದ್ಧದ ಭೀತಿ ಇರುವ ಹಿನ್ನೆಲೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಇಳಿಕೆಯೊಂದಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
ಏಷ್ಯನ್ ಷೇರುಗಳಲ್ಲಿ ನಷ್ಟ ಉಂಟಾಗುತ್ತಿದ್ದಂತೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಸುಮಾರು 700 ಅಂಕಗಳಷ್ಟು ಕುಸಿತ ಕಂಡಿತು. ಆದರೆ, ಉಕ್ರೇನ್ ಬಿಕ್ಕಟ್ಟಿನ ಕುರಿತು ಯುಎಸ್ ಮತ್ತು ರಷ್ಯಾ ನಡುವಿನ ಮಾತುಕತೆ ನಡೆಯಲಿದೆ ಎಂಬ ಭರವಸೆ ಹಿನ್ನೆಲೆ ವಹಿವಾಟಿನಲ್ಲಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸಿದ್ದರು.
ಸೆನ್ಸೆಕ್ಸ್ ಅಂತಿಮವಾಗಿ 149.38 ಪಾಯಿಂಟ್ ಅಥವಾ 0.26ರಷ್ಟು ಇಳಿಕೆಯಾಗಿದೆ. 57,683.59 ಅಂಕಗಳಲ್ಲಿ ದಿನದ ವಹಿವಾಟು ಕೊನೆಗೊಂಡಿದೆ. ಇನ್ನೂ ಎನ್‌ಎಸ್‌ಇ ನಿಫ್ಟಿ ಸಹ 69.65 ಪಾಯಿಂಟ್ ಕುಸಿದಿದ್ದು, 17,206.65ಕ್ಕೆ ದಿನದ ವಹಿವಾಟು ಕೊನೆಗೊಳಿಸಿದೆ.