ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ: ಸೆನ್ಸೆಕ್ಸ್ 381 ಅಂಕಗಳ ಜಿಗಿತ, 15,039ಕ್ಕೆ ತಲುಪಿದ ನಿಫ್ಟಿ - Nifty News

ದೇಶೀಯ ಇಕ್ವಿಟಿ ಮಾರುಕಟ್ಟೆ ಮಾನದಂಡಗಳು ಸೆನ್ಸೆಕ್ಸ್ 381 ಅಂಕಗಳ ಜಿಗಿತ ಕಂಡು 50,678ಕ್ಕೆ ತಲುಪಿದ್ದು, ನಿಫ್ಟಿ 15,039ಕ್ಕೆ ದಾಟಿದೆ.

sensex
ಷೇರು ಮಾರುಕಟ್ಟೆ

By

Published : Mar 3, 2021, 10:15 AM IST

ಮುಂಬೈ:ದಿನದ ಆರಂಭಿಕ ವ್ಯವಹಾರದಲ್ಲಿ ಸೆನ್ಸೆಕ್ಸ್​​ 381 ಅಂಕಗಳ ಏರಿಕೆ ದಾಖಲಿಸಿ ಇಂದೂ ಏರುಗತಿಯಲ್ಲಿ ಸಾಗಿದೆ. ಇನ್ನು ರಾಷ್ಟ್ರೀಯ ಷೇರು ಸಂವ್ಯೇದಿ ಸೂಚ್ಯಂಕ ನಿಫ್ಟಿ ಕೂಡಾ 15,039ಕ್ಕೆ ತಲುಪಿದೆ.

ಸಿಂಗಪುರದ ಎಕ್ಸ್​ಚೇಂಜ್​ನಲ್ಲಿ ನಿಫ್ಟಿ ಫ್ಯೂಚರ್ಸ್ ಕೇವಲ 18 ಪಾಯಿಂಟ್​ಗಳ ಏರಿಕೆ ಕಂಡು 15,001.50 ಕ್ಕೆ ತಲುಪಿದೆ. ಹಿಂದಿನ ಸೆಷನ್​ನಲ್ಲಿ, ಎರಡೂ ಶೀರ್ಷಿಕೆ ಸೂಚ್ಯಂಕಗಳು 1 ಶೇಕಡಾ ಹೆಚ್ಚಾಗಿದೆ. ಏಷ್ಯಾದ ಷೇರು ಮಾರುಕಟ್ಟೆಗಳು ಬುಧವಾರ ಸಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದ್ದವು. ಜಪಾನ್‌ನ ನಿಕ್ಕಿ ಮತ್ತು ದಕ್ಷಿಣ ಕೊರಿಯಾದ ಕೊಸ್ಪಿ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.

ಡೌ ಜೋನ್ಸ್ ಕೈಗಾರಿಕಾ ಸರಾಸರಿ ಶೇಕಡಾ 0.46 ರಷ್ಟು ಕುಸಿದು 31,391.52 ಕ್ಕೆ ತಲುಪಿದೆ. ಎಸ್ ಆ್ಯಂಡ್ ಪಿ 500 ಅಂದರೆ ಶೇ.0.81 ರಷ್ಟು ಕುಸಿದು 3,870.29 ಕ್ಕೆ ತಲುಪಿದೆ. ನಾಸ್ಡಾಕ್ ಕಾಂಪೊಸಿಟ್ ಶೇ.1.69 ರಷ್ಟು ಕುಸಿದು 13,358.79 ಕ್ಕೆ ತಲುಪಿದೆ. ಎಂಟಿಎಆರ್ ಟೆಕ್ನಾಲಜೀಸ್ ಹೂಡಿಕೆದಾರರಿಂದ 179 ಕೋಟಿ ರೂ. ಸಂಗ್ರಹಿಸಿದೆ.

ಇದನ್ನು ಓದಿ: ಸುತ್ತಿಗೆಯಿಂದ ಪತ್ನಿ, ಮಕ್ಕಳನ್ನು ಹೊಡೆದು - ಹೊಡೆದು ಕೊಂದ ಕ್ರೂರಿ!

ABOUT THE AUTHOR

...view details