ಕರ್ನಾಟಕ

karnataka

ETV Bharat / business

ಸಚಿವರ ಭರವಸೆ ನಡುವೆಯೂ ಮೇಲೇಳದ ಸೆನ್ಸೆಕ್ಸ್​...ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ - ನಿಫ್ಟಿ 11 ಸಾವಿರ ಅಂಕ

ಸಚಿವರ ಭರವಸೆ ನಡುವೆಯೂ ಷೇರುಪೇಟೆ ಆರಂಭದಲ್ಲೇ ಕುಸಿತ ಕಂಡಿದ್ದು, ನಿಫ್ಟಿ 11 ಸಾವಿರ ಅಂಕಗಳಿಗಿಂತ ಕೆಳಕ್ಕಿಳಿದಿದೆ.

ಸೆನ್ಸೆಕ್ಸ್

By

Published : Sep 16, 2019, 10:04 AM IST

ಮುಂಬೈ:ಷೇರುಪೇಟೆ ಆರಂಭದಲ್ಲೇ 200ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ಇನ್ನು ನಿಫ್ಟಿ 11 ಸಾವಿರ ಅಂಕಗಳಿಗಿಂತ ಕೆಳಕ್ಕಿಳಿದಿದೆ. ಕೇಂದ್ರ ಸರ್ಕಾರ ಶನಿವಾರವಷ್ಟೇ ರಫ್ತು ಉತ್ತೇಜನಕ್ಕೆ 50 ಸಾವಿರ ಕೋಟಿಯಷ್ಟು ನೆರವು ಘೋಷಿಸಿತ್ತು.

ಇನ್ನು ಗೃಹ ನಿರ್ಮಾಣಕ್ಕೆ ಹಲವು ಪೂರಕ ಕ್ರಮಗಳನ್ನ ಘೋಷಣೆ ಮಾಡಿತ್ತು. ಆದರೆ, ಇಂದು ಷೇರುಪೇಟೆ ಈ ಉತ್ತೇಜಕ ಕ್ರಮಗಳಿಂದ ಉತ್ತೇಜನಗೊಂಡಿಲ್ಲ ಎಂಬುದನ್ನ ಆರಂಭಿಕ ಕುಸಿತದ ಮೂಲಕ ತೋರಿಸಿದಂತಿತ್ತು.

ನಿಫ್ಟಿ 87 ಅಂಕ ಕುಸಿಯುವ ಮೂಲಕ 19,988 ರಲ್ಲೂ ಹಾಗೂ ಸೆನ್ಸೆಕ್ಸ್​​ 250ಕ್ಕೂ ಹೆಚ್ಚು ಅಂಕ ಕುಸಿಯುವ ಮೂಲಕ 37,121 ಅಂಕಗಳಲ್ಲಿ ವ್ಯವಹಾರ ನಿರತವಾಗಿತ್ತು. ಕಳೆದ ವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 1.09 ಹಾಗೂ 1.18 ರಷ್ಟು ಏರಿಕೆ ಕಂಡು 11,075 ಹಾಗೂ 37,384 ಅಂಕಗಳಲ್ಲಿ ವಾರಾಂತ್ಯ ಕೊನೆಗೊಳಿಸಿತ್ತು.

ABOUT THE AUTHOR

...view details