ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಕರಡಿ ಕುಣಿತ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150 ಅಂಕ ಕುಸಿತ - Mumbai trade marker

ಸೆನ್ಸೆಕ್ಸ್ ಹಾಗೂ ನಿಫ್ಟಿ ಕ್ರಮವಾಗಿ 150 ಮತ್ತು 49.15 ಅಂಕಗಳ ಇಳಿಕೆ ಕಂಡಿದ್ದು, ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅತೀ ಹೆಚ್ಚು ನಷ್ಟ ಅನುಭವಿಸಿದೆ.

ಷೇರುಪೇಟೆಯಲ್ಲಿ ಕರಡಿ ಕುಣಿತ
ಷೇರುಪೇಟೆಯಲ್ಲಿ ಕರಡಿ ಕುಣಿತ

By

Published : Sep 30, 2021, 10:45 AM IST

ಮುಂಬೈ:ಸತತ ಎರಡು ದಿನಗಳಿಂದ ಮುಂಬೈ ಷೇರುಪೇಟೆ ಕುಸಿತ ಕಾಣುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಭಾರೀ ಇಳಿಕೆ ಕಂಡಿವೆ.

150 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್ 59,234.67 ಪಾಯಿಂಟ್ಸ್​ಗೆ ಇಳಿಕೆಯಾಗಿದೆ. ಇತ್ತ ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 49.15 ಅಂಕಗಳ ಇಳಿಕೆಯೊಂದಿಗೆ 17,662.15 ಪಾಯಿಂಟ್ಸ್​ಗೆ ಕುಸಿತ ಕಂಡಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ: ಬೆಂಗಳೂರಲ್ಲಿ ಹೀಗಿದೆ ಇಂಧನ ದರ

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಅನೇಕ ಕಂಪನಿಗಳು ನಷ್ಟ ಅನುಭವಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಲೂಸರ್ ಆಗಿದೆ. ರಿಲಯನ್ಸ್ ಬಳಿಕ ಮಾರುತಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಹೆಚ್ಚು ನಷ್ಟ ಅನುಭವಿಸಿವೆ. ಇನ್ನು ಮತ್ತೊಂದೆಡೆ ಡಾ. ರೆಡ್ಡಿ, ಟಾಟಾ ಸ್ಟೀಲ್, ಎಲ್ & ಟಿ, ಎನ್‌ಟಿಪಿಸಿ, ಭಾರತಿ ಏರ್‌ಟೆಲ್ ಮತ್ತು ಹೆಚ್‌ಯುಎಲ್ ಕಂಪನಿಗಳ ಗಳಿಕೆ ಹೆಚ್ಚಾಗಿದೆ.

ABOUT THE AUTHOR

...view details