ಮುಂಬೈ: ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ 300ಕ್ಕೂ ಹೆಚ್ಚು ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟು ಆರಂಭಿಸಿದೆ. ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ (Equity Benchmark Sensex) 300 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದಿದೆ.
ವಿದೇಶಿ ವಿನಿಮಯದ ನಿರಂತರ ಹೊರಹರಿವಿಕೆಯಿಂದಾಗಿ (Foreign Fund Outflow) ಹೆಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರು (Infosys Share) ಹೆಚ್ಚಿನ ನಷ್ಟ ಅನುಭವಿಸಿವೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕವು 303.07 ಅಥವಾ ಶೇ.0.50 ರಷ್ಟು ಕುಸಿತ ಕಂಡು 60,049.75 ಅಂಕಗೊಳೊಂದಿಗೆ ವಹಿವಾಟು ನಡೆಸುತ್ತಿದೆ. ಜೊತೆಗೆ ನಿಫ್ಟಿ (Nifty) 102.60 ಅಂಕ ಅಥವಾ ಶೇ.0.57ರಷ್ಟು ಕುಸಿತ ಕಂಡು 17,914.60ರಷ್ಟಕ್ಕೆ ತಲುಪಿದೆ.
ವಹಿವಾಟು ಆರಂಭದಲ್ಲಿ ಮಹಿಂದ್ರ ಷೇರು (Mahindra Share) ಅತೀ ಹೆಚ್ಚಿನ ನಷ್ಟ ಅನುಭವಿಸಿದೆ. ಸುಮಾರು ಶೇ.2ರಷ್ಟು ಒಟ್ಟಾರೆ ನಷ್ಟದಲ್ಲಿ ಭಾಗಿಯಾಗಿದೆ. ಇದಾದ ಬಳಿಕ ನಷ್ಟದ ಸಾಲಿನಲ್ಲಿ ಹೆಚ್ಡಿಎಫ್ಸಿ, ಎಸ್ಬಿಐ, ಸೆಸ್ಟ್ಲೆ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಹೆಚ್ಸಿಎಲ್ ಟೆಕ್ ಮತ್ತು ಐಸಿಐಸಿಐ ಬ್ಯಾಂಕ್ ಇವೆ.