ಮುಂಬೈ:ಭಾರತೀಯ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಸತತವಾಗಿ ಕುಸಿತ ಕಾಣುತ್ತಾ ಸಾಗಿದೆ. ಇಂದೂ ಸಹ ಷೇರುಪೇಟೆ ಆರಂಭಿಕ ಆಘಾತ ಅನುಭವಿಸಿದೆ. ಆರಂಭದಲ್ಲಿ 800 ಅಂಕಗಳ ಕುಸಿತ ಕಂಡು 10 ಗಂಟೆ ವೇಳೆಗೆ ನಷ್ಟದ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
ವಹಿವಾಟು ಆರಂಭಗೊಂಡಾಗ ಬಿಎಸ್ಸಿ 856 ಅಂಕಗಳನ್ನು ಕಳೆದುಕೊಂಡು 56,635 ಅಂಕಗಳಲ್ಲಿ ವ್ಯವಹಾರ ಆರಂಭಿಸಿತ್ತು. ಇನ್ನು ನಿಫ್ಟಿ ಕೂಡಾ 250 ಅಂಕಗಳ ಇಳಿಕೆ ಕಂಡು 16898 ಅಂಕಗಳಲ್ಲಿ ವ್ಯವಹಾರ ನಡೆಸುತ್ತಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಿಎಸ್ಸಿ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸುಮಾರು ಶೇ 2.8 ರಷ್ಟು ಕುಸಿತ ಕಂಡಿವೆ. ಇಷ್ಟೊಂದು ಅನಿಶ್ಚಿತತೆಯ ನಡುವೆ, ಆಕ್ಸಿಸ್, ಪವರ್ ಗ್ರಿಡ್, ಭಾರತಿ ಏರ್ಟೆಲ್ ಹಾಗೂ ಟಾಟಾ ಸ್ಟೀಲ್ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ಆದರೆ, ಇನ್ನೊಂದು ಬದಿಯಲ್ಲಿ ಏಷ್ಯನ್ ಪೇಂಟ್, ವಿಪ್ರೋ, ಕೊಟಕ್ ಬ್ಯಾಂಕ್, ಎಚ್ಡಿಎಫ್ಸಿ, ಎಲ್ ಅಂಡ್ ಟಿ, ರಿಲಯನ್ಸ್ ಇಂಡಸ್ಟ್ರಿ, ಅಲ್ಟ್ರಾಟೆಕ್, ಇನ್ಫೋಸಿಸ್ ಸೇರಿದಂತೆ ಪ್ರಮುಖ ಷೇರುಗಳ ಬೆಲೆ ಇಳಿಕೆ ಕಂಡಿವೆ.
10 ಗಂಟೆ ಸುಮಾರಿಗೆ ತುಸು ಚೇತರಿಕೆ ಕಂಡಿರುವ ಷೇರುಪೇಟೆಯಲ್ಲಿ ಬಿಎಸ್ಸಿ 243.31 ಅಂಕ ಹಾಗೂ ನಿಫ್ಟಿ 69.55 ಅಂಕಗಳ ನಷ್ಟದೊಂದಿಗೆ ವ್ಯವಹಾರ ನಿರತವಾಗಿತ್ತು.
ಇದನ್ನು ಓದಿ:ವಂಚನೆ ಪ್ರಕರಣ: ಕಾರ್ವಿ ವ್ಯವಸ್ಥಾಪಕ ನಿರ್ದೇಶಕ ಪಾರ್ಥಸಾರಥಿ ಬಂಧಿಸಿದ ಇಡಿ