ನವದೆಹಲಿ:ಇಂದು ಬಿಎಸ್ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ತನ್ನ ಮೊದಲ ಅವಧಿಯ ವಹಿವಾಟಿನಲ್ಲಿ 760 ಅಂಕ ಕುಸಿತ ಕಂಡಿದೆ. ಜೊತೆಗೆ ಎನ್ಎಸ್ಇ ನಿಫ್ಟಿ ಸೂಚ್ಯಂಕವೂ ಕೂಡ 215 ಸೂಚ್ಯಂಕ ಇಳಿಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬದಲಾವಣೆ ಮತ್ತು ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವೇ ಇದಕ್ಕೆ ಕಾರಣವಾಗಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 760.46 ಅಂಕ ಕುಸಿದು 55,102 ಅಂಕಗಳಲ್ಲಿ ಸ್ಥಿರವಾದರೆ, ನಿಫ್ಟಿ 216.05 ಅಂಕ ಇಳಿದು 16437 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.