ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿಂದು ಹಾವು-ಏಣಿ ಆಟ: ದಿನದಂತ್ಯಕ್ಕೆ 304 ಪಾಯಿಂಟ್ ಕುಸಿದ ಸೆನ್ಸೆಕ್ಸ್ - Sensex dips 304 points

ಮುಂಬೈ ಷೇರುಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ ಏರಿಳಿತಗಳು ಕಂಡುಬಂದಿವೆ. ದಿನದಂತ್ಯಕ್ಕೆ ಸೆನ್ಸೆಕ್ಸ್‌ 304 ಪಾಯಿಂಟ್​ಗಳಷ್ಟು ಕುಸಿದಿದೆ.

Sensex declines 304.48 points to end at 57,684.82; Nifty drops by 69.85 points to settle at 17,245.65
ಮುಂಬೈ ಷೇರುಮಾರುಕಟ್ಟೆಯ ದಿನದ ವಹಿವಾಟಿನಲ್ಲಿ ಭಾರಿ ಏರಿಳಿತ: 304 ಪಾಯಿಂಟ್ ಕುಸಿತ ಕಂಡ ಸೆನ್ಸೆಕ್ಸ್​​

By

Published : Mar 23, 2022, 5:05 PM IST

ಮುಂಬೈ(ಮಹಾರಾಷ್ಟ್ರ): ಭಾರತೀಯ ಷೇರು ಮಾರುಕಟ್ಟೆಗಳ ಮಾನದಂಡವಾದ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 304 ಪಾಯಿಂಟ್‌ಗಳ ಕುಸಿತ ಕಂಡಿದ್ದು, 57,684.82 ಪಾಯಿಂಟ್‌ಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಹಿಂದಿನ ದಿನದ ವಹಿವಾಟು 57,989.30 ಪಾಯಿಂಟ್‌ಗಳಷ್ಟಿತ್ತು. ಇಂದು 304.48 ಪಾಯಿಂಟ್‌ಗಳು ಅಥವಾ ಶೇಕಡಾ 0.53ರಷ್ಟು ಕುಸಿತ ಕಂಡಿದೆ.

ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 58,198.64 ಪಾಯಿಂಟ್‌ಗಳಿಗೆ ತೆರಳಿ ಧನಾತ್ಮಕವಾಗಿತ್ತು. ಸ್ವಲ್ಪ ಸಮಯದ ನಂತರ ಗರಿಷ್ಠ 58,416.56 ಪಾಯಿಂಟ್​ಗಳಿಗೆ ಏರಿಕೆಯಾಗಿದ್ದ ಸೂಚ್ಯಂಕ ಮಧ್ಯಾಹ್ನದ ವೇಳೆಗೆ ಋಣಾತ್ಮಕವಾಗಿತ್ತು. ಇಂಟ್ರಾ ಡೇ ಸೂಚ್ಯಂಕದಲ್ಲಿ (ಒಂದೇ ದಿನದಲ್ಲಿ ಷೇರುಗಳನ್ನು ಖರೀದಿಸಿ, ಮಾರುವ ಪ್ರಕ್ರಿಯೆ) 57,568.59 ಪಾಯಿಂಟ್‌ಗಳಿಗೆ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ 69.85 ಪಾಯಿಂಟ್ ಅಥವಾ ಶೇಕಡಾ 0.4ರಷ್ಟು ಕುಸಿತ ಕಂಡು 17,245.65 ಪಾಯಿಂಟ್‌ಗೆ ತಲುಪಿದೆ. ಹಿಂದಿನ ದಿನದ ವಹಿವಾಟು ಮುಕ್ತಾಯವಾದಾಗ 17,315.50 ಅಂಕಗಳಿಗೆ ನಿಫ್ಟಿ ತಲುಪಿತ್ತು. ಈ ಮೂಲಕ ಮಂಗಳವಾರ 197.90 ಪಾಯಿಂಟ್ ಅಥವಾ ಶೇಕಡಾ 1.16ರಷ್ಟನ್ನು ಕಳೆದುಕೊಂಡಿತ್ತು.

ಯಾರಿಗೆ ಲಾಭ, ನಷ್ಟ?: ಎಚ್‌ಡಿಎಫ್‌ಸಿ ಷೇರಿನ ಬೆಲೆ ಶೇಕಡಾ 2.36ರಷ್ಟು ಕುಸಿದು 2346.20 ರೂಪಾಯಿಗೆ ತಲುಪಿದರೆ, ಕೋಟಕ್ ಬ್ಯಾಂಕ್ ಶೇಕಡಾ 2.25ರಷ್ಟು ಕುಸಿದು 1767.95 ರೂಪಾಯಿಗೆ ತಲುಪಿದೆ. ಮಾರುತಿ ಸುಜುಕಿ ಶೇಕಡಾ 1.54ರಷ್ಟು ಕುಸಿದು 7643.80 ರೂಪಾಯಿಗೆ ತಲುಪಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇಕಡಾ 1.33ರಷ್ಟು ಕುಸಿದು 774.15 ರೂಪಾಯಿಗೆ ತಲುಪಿದೆ.

ರೂಪಾಯಿ ಮೌಲ್ಯ ಇಳಿಕೆ:ಡಾಲರ್ ಬೇಡಿಕೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಬುಧವಾರ ಡಾಲರ್ ಎದುರು 14 ಪೈಸೆ ಕಡಿಮೆಯಾದ ರೂಪಾಯಿ ಮೌಲ್ಯ ಒಂದು ಡಾಲರ್​ಗೆ 76.32 ರೂಪಾಯಿ ಇದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರಂಭದ ವಹಿವಾಟಿನಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡಿದ್ದ ರೂಪಾಯಿ, ಒಂದು ಡಾಲರ್​ಗೆ 76.08 ರೂಪಾಯಿಗೆ ತಲುಪಿತ್ತು.

ABOUT THE AUTHOR

...view details