ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಮತ್ತೆ ಕರಡಿ ಕುಣಿತದ ಅಬ್ಬರ:  1,069 ಅಂಕ ಕುಸಿತ - ಬ್ಯಾಂಕ್‌, ಆಟೋ ಮೊಬೈಲ್‌

ಕೊರೊನಾ ಲಾಕ್‌ಡೌನ್‌ ವಿಸ್ತರಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ 1,069 ಅಂಕಗಳ ಕುಸಿತ ಕಂಡಿದೆ. ಆಟೋ ಮೊಬೈಲ್ ಕ್ಷೇತ್ರವಾದ ಮಾರುತಿ ಸುಜೂಕಿ ಶೇ.7.1 ಮತ್ತು ಬಜಾಬ್‌ ಕಂಪನಿಗಳ ಷೇರು ಮೌಲ್ಯ ಶೇ.6.9 ರಷ್ಟು ನಷ್ಟ ಅನುಭವಿಸಿವೆ.

Sensex crashes 1,069 pts; bank, auto stocks among worst hit
ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ 1,069 ಅಂಕ ಕುಸಿತ

By

Published : May 18, 2020, 5:18 PM IST

ಮುಂಬೈ: ದೇಶಾದ್ಯಂತ ಇದೇ ತಿಂಗಳ 31 ವರೆಗೆ ಕೊರೊನಾ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಹೀಗೆ ಲಾಕ್​​ಡೌನ್​ ವಿಸ್ತರಣೆ ಆದ ಮರುದಿನವೇ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರೆದಿದೆ. ಇಂದು ಆರಂಭಿಕ ಸೆನ್ಸೆಕ್‌ 1,069 ಅಂಕಗಳ ಶೇ.3.44 ರಷ್ಟು ಕುಸಿತದೊಂದಿಗೆ 30,029 ರಲ್ಲಿ ವಹಿವಾಟು ನಡೆಸಿದೆ.

ನಿಫ್ಟಿ 314 ಅಂಕಗಳ ನಷ್ಟ ಕಂಡು 8,823 ರಲ್ಲಿ ವಹಿವಾಟು ನಡೆಸಿದೆ. ಬೇಡಿಕೆ ಮತ್ತು ಉತ್ಪಾದನೆ ಹೆಚ್ಚಿಸಲು ಆರ್ಥಿಕ ಪ್ಯಾಕೇಜ್​​​​ನಲ್ಲಿ ಘೋಷಣೆ ಮಾಡಿಲ್ಲ ಎಂಬ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಷೇರುಮಾಟುಕಟ್ಟೆ ಕುಸಿತದ ಹಾದಿ ಹಿಡಿದಿದೆ ಎಂದು ಹೇಳಲಾಗಿದೆ.

ಆ್ಯಕ್ಸಿಸ್​​​​‌ ಬ್ಯಾಂಕ್‌ನ ಒಂದು ಷೇರು ಬೆಲೆ 378.35ಕ್ಕೆ ಇಳಿಕೆಯಾಗಿ ಶೇಕಡಾ 7 ರಷ್ಟು ನಷ್ಟು ಹಾಗೂ ಐಸಿಸಿಐ ಬ್ಯಾಂಕ್‌ ಶೇ.6.8 ರಷ್ಟು ನಷ್ಟ ಅನುಭವಿಸಿತು. ಆಟೋ ಮೊಬೈಲ್ ಕ್ಷೇತ್ರವಾದ ಮಾರುತಿ ಸುಜುಕಿ 7.1 ಹಾಗೂ ಬಜಾಜ್‌ ಶೇ.6.9 ರಷ್ಟು ಇಳಿಕೆ ಕಂಡಿದೆ.

ಸಿಪ್ಲಾ, ಟಾಟಾ ಕನ್ಸಲ್ಟೆನ್ಸಿ, ಭಾರ್ತಿ ಇಫ್ರಾಟೆಲ್‌, ಇನ್ಫೋಸಿಸ್‌ ಮತ್ತು ಹೆಚ್‌ಸಿಎಲ್‌ ಟೆಕ್ನಾಲಜಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂತು.

ABOUT THE AUTHOR

...view details