ಮುಂಬೈ:ಕಳೆದ ಎರಡು ದಿನಗಳಿಂದ ತಲ್ಲಣ ಸೃಷ್ಟಿಸಿದ್ದ ಷೇರುಪೇಟೆಯಲ್ಲಿ ಇಂದು ತುಸು ಚೇತರಿಕೆ ಕಂಡು ಬಂದಿದೆ. ನಿನ್ನೆ 600 ಅಂಕ ಹಾಗೂ ಸೋಮವಾರ 280 ಅಂಕಗಳಷ್ಟು ಕುಸಿತ ಕಂಡಿದ್ದ ಷೇರುಪೇಟೆ ಇಂದು ಆರಂಭಿಕ 144 ಅಂಕಗಳ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ತುಸು ಚೇತರಿಕೆ ಕಾಣುವಂತೆ ಮಾಡಿದೆ.
ನಿನ್ನೆ ಹಣಕಾಸು, ಬ್ಯಾಂಕಿಂಗ್, ಐಟಿ, ಫಾರ್ಮಾ ಸೇರಿದಂತೆ ಎಲ್ಲ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿತ್ತು. ಸೌದಿಯಲ್ಲಿ ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿ ಷೇರುಪೇಟೆ ಮೇಲೆ ಭಾರಿ ಪರಿಣಾಮ ಬೀರಿತ್ತು.