ಕರ್ನಾಟಕ

karnataka

ETV Bharat / business

ವಿಜಯ್​​ ಮಲ್ಯ ಮೇಲ್ಮನವಿ ಅರ್ಜಿ: ಆಗಸ್ಟ್​ 20ಕ್ಕೆ ವಿಚಾರಣೆ ಮುಂದೂಡಿಕೆ - ವಿಜಯ್​ ಮಲ್ಯ ಅರ್ಜಿ ವಿಚಾರಣೆ

ಉದ್ಯಮಿ ವಿಜಯ್ ಮಲ್ಯ 2017 ಮೇ ತಿಂಗಳಲ್ಲಿ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ.

Vijay Mallya
ವಿಜಯ್​​ ಮಲ್ಯ

By

Published : Aug 6, 2020, 4:13 PM IST

ನವದೆಹಲಿ:ಮದ್ಯದೊರೆ, ಉದ್ಯಮಿ ವಿಜಯ್ ಮಲ್ಯ 2017 ಮೇನಲ್ಲಿ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ.

ತನ್ನ ಮಕ್ಕಳಿಗೆ ಅಕ್ರಮ ಹಣ ವರ್ಗಾವಣೆ ಮಾಡಿರುವುದು ನ್ಯಾಯಾಂಗ ನಿಂದನೆಯ ಪ್ರಯತ್ನವಾಗಿದ್ದು, ವಿಜಯ್ ಮಲ್ಯ ತಪಿತಸ್ಥನೆಂದು ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧವಾಗಿ ವಿಜಯ್ ಮಲ್ಯ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದರು. ಇದೀಗ ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಯು.ಯು.ಲಲಿತ್, ಅಶೋಕ್ ಭೂಷಣ್ ಜೂನ್ 16ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದು, ಈ ವೇಳೆ 2017ರಿಂದ ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ದಾಖಲಾತಿಗಳನ್ನು ಹಾಜರುಪಡಿಸುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿತ್ತು.

ಈಗ ಮತ್ತೆ ವಿಜಯ್​ ಮಲ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರೆದಿದ್ದು, ಮತ್ತೆ ಆಗಸ್ಟ್ 20ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ABOUT THE AUTHOR

...view details