ಮುಂಬೈ : ಗೃಹ ನಿರ್ಮಾಣ ಸಾಲದ ದರಗಳ ಮೇಲೆ 20 ಬೇಸಿಸ್ ಪಾಯಿಂಟ್ಗಳವರೆಗೆ ಇದ್ದ ರಿಯಾಯಿತಿಯನ್ನು 25 ಬೇಸಿಸ್ ಪಾಯಿಂಟ್ಗಳವರೆಗೆ ಏರಿಸುವುದಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದೆ.
ಎಸ್ಬಿಐನ ಈ ನಿರ್ಧಾರದಿಂದಾಗಿ ಸುಮಾರು 75 ಲಕ್ಷ ರೂಪಾಯಿ ಮೇಲ್ಪಟ್ಟ ಗೃಹ ನಿರ್ಮಾಣ ಸಾಲದ ಮೇಲಿನ ಬಡ್ಡಿಯಲ್ಲಿ 20 ಬೇಸಿಸ್ ಪಾಯಿಂಟ್ಗಳಷ್ಟು ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದಾಗಿದೆ. ಗ್ರಾಹಕರು ಎಸ್ಬಿಐ ಮೊಬೈಲ್ ಆ್ಯಪ್ ಯೋನೋ (YONO)ದಿಂದ ಅರ್ಜಿ ಸಲ್ಲಿಕೆ ಮಾಡಿದ್ದರೆ 5 ಹೆಚ್ಚುವರಿ ಬೇಸಿಸ್ ಪಾಯಿಂಟ್ಗಳಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಮನೆ ನಿರ್ಮಾಣದ ಕನಸಿರುವ ಮಹಿಳೆಯರಿಗೂ ಎಸ್ಬಿಐ ವಿಶೇಷ ರಿಯಾಯಿತಿ ಘೋಷಿಸಿದೆ.
ಗ್ರಾಹಕರು ತಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇತ್ತೀಚೆಗಷ್ಟೇ ಹಬ್ಬದ ಕೊಡುಗೆಗಳನ್ನು ವಿಸ್ತರಿಸಿದ್ದ ಎಸ್ಬಿಐ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬಡ್ಡಿ ರಿಯಾಯಿತಿ ನೀಡಲು ಮುಂದಾಗಿತ್ತು. ಈ ಮೊದಲು 30 ಲಕ್ಷದಿಂದ 2 ಕೋಟಿಯವರೆಗೆ ಗೃಹ ಸಾಲ ಪಡೆದ ಗ್ರಾಹಕನಿಗೆ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ 10 ಬೇಸಿಸ್ ಪಾಯಿಂಟ್ಗಳಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಅದನ್ನು 20 ಬೇಸಿಸ್ ಪಾಯಿಂಟ್ಗಳಿಗೆ ಏರಿಕೆ ಮಾಡಲಾಗಿತ್ತು.