ಕರ್ನಾಟಕ

karnataka

ETV Bharat / business

ನೀವು ಹೆಚ್ಚಿನ ಆದಾಯವನ್ನು ಗಳಿಸಬೇಕೇ?.. ಇಲ್ಲಿ ಹೂಡಿಕೆ ಮಾಡಿ ಹಣ ಸಂಪಾದಿಸಿ

ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಸಾಲ ಮಾಡಿ ಹೂಡಿಕೆ ಮಾಡಬೇಡಿ. ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಲು ಸ್ವಂತ ಹಣವನ್ನೇ ಬಳಸಬೇಕು. ಸಾಲ ಮಾಡಿ ಹೂಡಿಕೆ ಮಾಡುವುದು ಸರಿಯಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ..

investment option
ಹೂಡಿಕೆ ಮಾಡಿ

By

Published : Dec 29, 2021, 3:55 PM IST

ಹೈದರಾಬಾದ್ :ಸಾಕಷ್ಟು ಹಣವನ್ನು ಹೊಂದಿರುವ ಮತ್ತು ತಮ್ಮ ಆಸ್ತಿಯನ್ನು ಹೆಚ್ಚಿಸಲು ಬಯಸುವ ಅನೇಕರು ಹಲವಾರು ಹಾದಿಗಳನ್ನು ಕಂಡುಕೊಳ್ಳುತ್ತಾರೆ. ಇದರಲ್ಲಿ ಉತ್ತಮ ಆಯ್ಕೆ ಎಂದರೆ ಅದು ಷೇರು ಮಾರುಕಟ್ಟೆ. ಮಧ್ಯವರ್ತಿಗಳ ಸಲಹೆ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯವನ್ನು ನಮ್ಮದಾಗಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಸ್ಟಾಕ್ ಮಾರುಕಟ್ಟೆಗಳಲ್ಲಿನ ಹೂಡಿಕೆಯು ಮಹತ್ತರವಾಗಿ ಹೆಚ್ಚಾಗಿದೆ ಮತ್ತು ಅನೇಕರು ಅದರಿಂದ ಲಾಭ ಪಡೆದಿದ್ದಾರೆ. ಇದನ್ನು ನೋಡಿ ಹೆಚ್ಚಿನ ಜನರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

ಇನ್ನು ಕೆಲವರು ಹಣವಿಲ್ಲದವರು, ದೊಡ್ಡ ಮೊತ್ತವನ್ನು ಗಳಿಸುವ ನಿರೀಕ್ಷೆಯಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಲ ಮಾಡುತ್ತಿದ್ದಾರೆ. ಆದರೆ, ಅದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎನ್ನುತ್ತಾರೆ ಷೇರುಪೇಟೆ ತಜ್ಞ ತುಮ್ಮ ಬಾಲರಾಜ್.

ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಸಾಲ ಮಾಡಿ ಹೂಡಿಕೆ ಮಾಡಬೇಡಿ. ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಲು ಸ್ವಂತ ಹಣವನ್ನೇ ಬಳಸಬೇಕು. ಸಾಲ ಮಾಡಿ ಹೂಡಿಕೆ ಮಾಡುವುದು ಸರಿಯಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಆರ್ಥಿಕ ರಕ್ಷಣೆಗೆ ಪಾಲಿಸಿ ಮಾಡಿಸಿ :ನಿಮ್ಮ ಕುಟುಂಬಸ್ಥರಿಗೆ ಆರ್ಥಿಕ ರಕ್ಷಣೆ ನೀಡಲು ಟರ್ಮ್ ಪಾಲಿಸಿ ಮಾಡಿಸಿದರೆ ಒಳ್ಳೆಯದು. ಉತ್ತಮವಾದ ಕಂಪನಿಯೊಂದರಲ್ಲಿ ನಿಮ್ಮ ಪಾಲಿಸಿಯನ್ನು ಮಾಡಿಸಿಕೊಳ್ಳಿ. ಅಲ್ಲದೆ, ವೈಯಕ್ತಿಕ ಅಪಘಾತ ವಿಮೆ ಮತ್ತು ಅಂಗವೈಕಲ್ಯ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ಅದರಲ್ಲಿ ಒಂದನ್ನು ಮಾತ್ರ ನೀವು ಪಡೆದುಕೊಳ್ಳಬಹುದು.

ಶ್ರೇಣೀಕೃತ ಹೂಡಿಕೆ ಯೋಜನೆ (SIP) ಮೂಲಕ ವಿವಿಧ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ತಿಂಗಳಿಗೆ 10,000 ರೂಪಾಯಿ ಹೂಡಿಕೆ ಮಾಡಿ, ದೀರ್ಘಾವಧಿಯಲ್ಲಿ ಉತ್ತಮ ಲಾಭ ಪಡೆದುಕೊಳ್ಳಬಹುದು. ತಿಂಗಳಿಗೆ 10 ಸಾವಿರ ರೂಪಾಯಿಗಳನ್ನು 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಸುಮಾರು 44,73,565 ರಷ್ಟು ಲಾಭ ಪಡೆಯಬಹುದು.

ಪ್ರಸ್ತುತ ಷೇರು ಮಾರುಕಟ್ಟೆಗಳ ಕಾರ್ಯಕ್ಷಮತೆ ಉತ್ತಮವಾಗಿದೆ. ಈ ಸಮಯದಲ್ಲಿ ಹೂಡಿಕೆ ಮಾಡಿದವರು ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು. ಷೇರು ಮಾರುಕಟ್ಟೆಯಲ್ಲಿ ಲಾಭ ಮಾತ್ರವಲ್ಲ, ನಷ್ಟವೂ ಇದೆ ಎಂಬುದನ್ನು ಗಮನಿಸಬೇಕು.

ಹೂಡಿಕೆ ವೇಳೆ ಯಾವಾಗಲೂ ನಿಮ್ಮ ಸ್ವಂತ ಹಣವನ್ನು ಮಾತ್ರ ವಿನಿಯೋಗಿಸಬೇಕು. ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನಷ್ಟವಾದರೆ, ನಿಮ್ಮ ಸಾಲವೂ ಕೂಡ ಬೆಳೆಯುತ್ತದೆ. ಇದರಿಂದ ಹೂಡಿಕೆ ವೇಳೆ ನಿಮ್ಮದೇ ಹಣವನ್ನು ಮಾತ್ರ ಹೂಡಿಕೆ ಮಾಡಬೇಕು ಎಂದು ಷೇರುಪೇಟೆ ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಇನ್ನಿಲ್ಲ

ABOUT THE AUTHOR

...view details