ಕರ್ನಾಟಕ

karnataka

ETV Bharat / business

ರಷ್ಯಾದಲ್ಲಿ ಮಾಸ್ಟರ್ ಕಾರ್ಡ್‌, ವೀಸಾ ಕಾರ್ಡ್‌ ಸೇವೆ ರದ್ದು: 'ಯೂನಿಯನ್‌ ಪೇ'ಗೆ ಬದಲಾವಣೆ - ಚೀನಾದ ಯೂನಿಯನ್‌ ಪೇ ಬಳಕೆ

ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕಾಗಿ ಪಾಶ್ಚಿಮಾತ್ಯ ದೇಶಗಳಿಂದ ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿರುವ ರಷ್ಯಾದಲ್ಲಿ ಇದೀಗ ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಾರ್ಡ್​ಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Mar 7, 2022, 8:50 AM IST

ನವದೆಹಲಿ:ವೀಸಾ ಮತ್ತು ಮಾಸ್ಟರ್ ಕಾರ್ಡ್ ಪಾವತಿ ವ್ಯವಸ್ಥೆಗಳನ್ನು ಬಳಸಿಕೊಂಡು ರಷ್ಯಾದ ಬ್ಯಾಂಕ್‌ಗಳು ನೀಡಿದ ಕ್ರೆಡಿಟ್ ಕಾರ್ಡ್‌ಗಳು ಮಾ. 9 ರ ನಂತರ ವಿದೇಶದಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತವೆ ಎಂದು ರಷ್ಯಾದ ಸೆಂಟ್ರಲ್ ಬ್ಯಾಂಕ್ ಭಾನುವಾರ ತಿಳಿಸಿದೆ.

ಈ ಹಿನ್ನೆಲೆ ಚೀನಾದ 'ಯೂನಿಯನ್‌ ಪೇ ಕಾರ್ಡ್ ಆಪರೇಟರ್' ವ್ಯವಸ್ಥೆಯನ್ನು ಬಳಸಿಕೊಂಡು ಕಾರ್ಡ್‌ಗಳನ್ನು ವಿತರಿಸಲು ಪ್ರಾರಂಭಿಸುವ ಯೋಜನೆಯನ್ನು ರಷ್ಯಾದ ಹಲವಾರು ಬ್ಯಾಂಕ್​​ಗಳು ಪ್ರಕಟಿಸಿವೆ. ರಷ್ಯಾದ ಬ್ಯಾಂಕುಗಳು ಚೀನಾದ ಯೂನಿಯನ್‌ ಪೇಯೊಂದಿಗೆ ವೀಸಾ, ಮಾಸ್ಟರ್‌ಕಾರ್ಡ್ ಕಟ್ ಲಿಂಕ್‌ಗಳಂತೆ ಕಾರ್ಡ್‌ಗಳನ್ನು ನೀಡಬಹುದು.

ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿ, ಆರ್ಥಿಕ ನಿರ್ಬಂಧ ಹೇರಿವೆ. ಇದೀಗ ಮಾಸ್ಟರ್​ ಕಾರ್ಡ್​ ಮತ್ತು ವೀಸಾ ಕಂಪನಿಗಳು ರಷ್ಯಾದ ಬ್ಯಾಂಕ್​ಗಳ ಮೇಲೆ ನಿರ್ಬಂಧ ವಿಧಿಸಿವೆ. ಈ ಹಿನ್ನೆಲೆ ಹೊಸ ಕಾರ್ಡ್‌ಗಳನ್ನು ಹೊಂದಿರುವವರು ವಿದೇಶದಲ್ಲಿ ಹಣ ಪಾವತಿಸಲು ಮತ್ತು ಹಿಂಪಡೆಯಲು ಬಳಸಲು ಅನುವು ಮಾಡಿಕೊಡುತ್ತದೆ ಎಂದು ಆರ್‌ಟಿ ವರದಿ ಮಾಡಿದೆ.

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಹಿನ್ನೆಲೆ ಅಂತಾರಾಷ್ಟ್ರೀಯ ಹಣಕಾಸು ಸೇವಾ ಪೂರೈಕೆದಾರರಾದ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಮುಂದಿನ ಕೆಲವು ದಿನಗಳಲ್ಲಿ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಹೇಳಿವೆ. ಈ ಹಿಂದೆ, ಪೇಪಾಲ್, ನೆಟ್‌ಫ್ಲಿಕ್ಸ್, ಇಂಟೆಲ್, ಇಂಡಿಟೆಕ್ಸ್, ಏರ್‌ಬಿಎನ್‌ಬಿ ಮತ್ತು ರೋಲ್ಸ್ ರಾಯ್ಸ್‌ನಂತಹ ಕಂಪನಿಗಳು ದೇಶದ ಮಾರುಕಟ್ಟೆ ತೊರೆಯುವುದಾಗಿ ಘೋಷಿಸಿದ್ದವು.

ಯೂನಿಯನ್‌ ಪೇಗೆ ಬದಲಾಯಿಸುವ ಕುರಿತು ಪ್ರಕಟಣೆ: ಸ್ಬೆರ್​​​​ಬ್ಯಾಂಕ್​ ಸೇರಿದಂತೆ ರಷ್ಯಾದ ಪ್ರಮುಖ ಬ್ಯಾಂಕ್‌ಗಳು ಹಾಗೆಯೇ ಆಲ್ಫಾ ಬ್ಯಾಂಕ್ ಇತ್ತೀಚಿನ ಬೆಳವಣಿಗೆಗಳ ಕಾರಣದಿಂದಾಗಿ ಯೂನಿಯನ್‌ ಪೇಗೆ ಬದಲಾಯಿಸುವ ಕುರಿತು ಪ್ರಕಟಣೆಗಳನ್ನು ನೀಡಿವೆ. ರಷ್ಯಾದ ಕೆಲವು ಬ್ಯಾಂಕ್‌ಗಳಾದ ಪೊಚ್ಟಾ ಬ್ಯಾಂಕ್, ಗಾಜ್‌ಪ್ರೊಮ್‌ಬ್ಯಾಂಕ್, ಪ್ರಾಮ್ಸ್‌ವ್ಯಾಜ್‌ಬ್ಯಾಂಕ್, ಸೋವ್‌ಕಾಮ್‌ಬ್ಯಾಂಕ್ ಮತ್ತು ಹಲವಾರು ಇತರ ಸಣ್ಣ ಬ್ಯಾಂಕ್‌ಗಳು ಈ ಹಿಂದೆ ಯೂನಿಯನ್‌ಪೇ ಕಾರ್ಡ್ ಆಪರೇಟರ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡುತ್ತಿದ್ದವು ಎಂದು ಆರ್‌ಟಿ ವರದಿ ಮಾಡಿದೆ.

2002ರಲ್ಲಿ ಸ್ಥಾಪನೆಯಾದ 'ಯೂನಿಯನ್‌ ಪೇ' ಎಂಬ ಅಂತಾರಾಷ್ಟ್ರೀಯ ಪಾವತಿ ವ್ಯವಸ್ಥೆ 2005ರಲ್ಲಿ ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಪಡೆಯಿತು. ಶಾಂಘೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯು ಸ್ವಿಟ್ಜರ್ಲೆಂಡ್, ಗ್ರೀಸ್, ಇಟಲಿ, ಸ್ಪೇನ್, ಜರ್ಮನಿ, ಮೆಕ್ಸಿಕೋ, ಸೈಪ್ರಸ್, ಥಾಯ್ಲೆಂಡ್​​ ಸೇರಿದಂತೆ ಜಗತ್ತಿನಾದ್ಯಂತ 180 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ರಷ್ಯಾ ವಿರುದ್ಧ ಮಾಸ್ಟರ್​ ಕಾರ್ಡ್​, ವೀಸಾ ಆರ್ಥಿಕ ದಿಗ್ಬಂಧನ.. ದೇಶದಲ್ಲಿ ಸೇವೆ ಸ್ಥಗಿತಗೊಳಿಸಿ ಘೋಷಣೆ


ABOUT THE AUTHOR

...view details