ಕರ್ನಾಟಕ

karnataka

ETV Bharat / business

ಭಾರತದ ಪರಮಾಪ್ತ ಗೆಳೆಯ ರಷ್ಯಾ ಕೊಟ್ಟಿತ್ತು 72ನೇ ಗಣರಾಜ್ಯೋತ್ಸವದ ಗಿಫ್ಟ್! - ಪ್ರಯಾಣ ನಿರ್ಬಂಧ ಬಗ್ಗೆ ರಷ್ಯಾ ರಾಯಭಾರ ಕಚೇರಿ

ರಷ್ಯಾ ಸರ್ಕಾರದ ಪತ್ರಿಕಾ ಹೇಳಿಕೆಯಲ್ಲಿ ಫಿನ್​ಲ್ಯಾಂಡ್, ವಿಯೆಟ್ನಾಂ, ಭಾರತ ಮತ್ತು ಕತಾರ್ ರಾಷ್ಟ್ರಗಳು ನಾಗರಿಕರು ಮತ್ತು ನಿವಾಸ ಪರವಾನಿಗೆ ಹೊಂದಿರುವವರಿಗೆ ವಾಯು ಮಾರ್ಗದ ಮೂಲಕ ರಷ್ಯಾಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ..

Russia
Russia

By

Published : Jan 26, 2021, 2:45 PM IST

ನವದೆಹಲಿ:ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತಕ್ಕೆ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ರಷ್ಯಾ ತೆಗೆದು ಹಾಕಿದೆ ಎಂದು ರಷ್ಯಾ ರಾಯಭಾರ ಕಚೇರಿ ಟ್ವೀಟ್ ಮೂಲಕ ದೃಢಪಡಿಸಿದೆ. ಭಾರತ ಹೊರತುಪಡಿಸಿ ಫಿನ್​ಲ್ಯಾಂಡ್, ವಿಯೆಟ್ನಾಂ ಮತ್ತು ಕತಾರ್ ದೇಶಗಳಿಂದಲೂ ಪ್ರಯಾಣದ ನಿರ್ಬಂಧ ತೆಗೆದು ಹಾಕಲಾಗಿದೆ.

ಫಿನ್​ಲ್ಯಾಂಡ್, ವಿಯೆಟ್ನಾಂ, ಭಾರತ ಮತ್ತು ಕತಾರ್ ನಾಗರಿಕರಿಗೆ ಕೋವಿಡ್​-19 ಹರಡುವಿಕೆಯಿಂದ ವಿಧಿಸಲಾದ ರಷ್ಯಾ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತಿದೆ.

ಈ ಆದೇಶಕ್ಕೆ ರಷ್ಯಾ ಸರ್ಕಾರದ ಅಧ್ಯಕ್ಷ ಮಿಖಾಯಿಲ್ ಮಿಶುಸ್ಟಿನ್ ಅವರು 2021ರ ಜನವರಿ 25ರಂದು ಸಹಿ ಹಾಕಿದರು ಎಂದು ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ರಷ್ಯಾ ಸರ್ಕಾರದ ಪತ್ರಿಕಾ ಹೇಳಿಕೆಯಲ್ಲಿ ಫಿನ್​ಲ್ಯಾಂಡ್, ವಿಯೆಟ್ನಾಂ, ಭಾರತ ಮತ್ತು ಕತಾರ್ ರಾಷ್ಟ್ರಗಳು ನಾಗರಿಕರು ಮತ್ತು ನಿವಾಸ ಪರವಾನಿಗೆ ಹೊಂದಿರುವವರಿಗೆ ವಾಯು ಮಾರ್ಗದ ಮೂಲಕ ರಷ್ಯಾಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ರಷ್ಯಾದ ನಾಗರಿಕರು ಈ ಯಾವುದೇ ದೇಶಗಳಿಗೆ ಪ್ರಯಾಣಿಸಬಹುದು.

2020ರ ಮಾರ್ಚ್​ 16ರಂದು ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಉಲ್ಬಣ ತಡೆಯುವ ಸಲುವಾಗಿ ರಷ್ಯಾ ಪ್ರಯಾಣ ನಿರ್ಬಂಧಗಳನ್ನು ವಿಧಿಸಿತ್ತು. ಕಳೆದ 24 ಗಂಟೆಗಳಲ್ಲಿ ರಷ್ಯಾ 19,290 ಹೊಸ ಕೋವಿಡ್​ -19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಸಂಖ್ಯೆ 3,738,690ಕ್ಕೆ ತಲುಪಿದೆ.

ABOUT THE AUTHOR

...view details