ಮುಂಬೈ:ಕೋವಿಡ್ ರೂಪಾಂತರಿ ಹೊಸ ತಳಿ ಒಮಿಕ್ರೋನ್ ಷೇರು ಮಾರುಕಟ್ಟೆಯನ್ನು ಮತ್ತಷ್ಟು ಅಲುಗಾಡಿಸಿದೆ. ಇದು ರೂಪಾಯಿ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ.
ಹೂಡಿಕೆದಾರರು ತಮ್ಮ ಇಕ್ವಿಟಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದ್ದರಿಂದ ಡಾಲರ್ ಮುಂದೆ ರೂಪಾಯಿ ದರ ತಿಂಗಳಲ್ಲಿಯೇ ಕನಿಷ್ಠ ಇಳಿಕೆ ಕಂಡಿದೆ.
ಸೋಮವಾರದ ವಹಿವಾಟಿನಲ್ಲಿ ರೂಪಾಯಿ ದರ ಡಾಲರ್ ಮುಂದೆ 5 ಪೈಸೆ ಏರಿಕೆ ಕಂಡು 74.84 ರಷ್ಟಿತ್ತು. ಒಂದು ಹಂತದಲ್ಲಿ 74.82 ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ, ಷೇರು ಮಾರುಕಟ್ಟೆಯಲ್ಲಾದ ದಿಢೀರ್ ಬದಲಾವಣೆಯಿಂದ ರೂಪಾಯಿ ದರ ಡಾಲರ್ ಎದುರು ಏಕಾಏಕಿ 74.98ಕ್ಕೆ ಕುಸಿತ ಕಂಡು ಕನಿಷ್ಠ ದರ ದಾಖಲಿಸಿತು.