ಪುಣೆ: 5.6 ಕೋಟಿ ರೂ. ಮೊತ್ತದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಮತ್ತು 31.5 ಕೋಟಿ ರೂ. ಮೊತ್ತದ ಬೋಗಸ್ ಇನ್ವಾಯ್ಸ್ ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಮಾರ್ಚ್ 2 ರಂದು ನರೇಶ್ ಕುಮಾರ್ ಬನಾರ್ಸಿ ದಾಸ್ ಬನ್ಸಾಲ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.