ಚಂಡೀಗಢ: ಬಾಲಿವುಡ್ ನಟ ರಾಹುಲ್ ಬೋಸ್ ಇತ್ತೀಚೆಗಷ್ಟೆ ಪಂಚತಾರಾ ಹೋಟೆಲೊಂದು ಎರಡು ಬಾಣೆಹಣ್ಣಿಗೆ ದುಬಾರಿ ಬಿಲ್ ಮಾಡಿದ ಬಗ್ಗೆ ವಿಡಿಯೋ ಮಾಡಿದ್ದರು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
2 ಬಾಳೆಹಣ್ಣಿಗೆ 442 ರೂ.ಬಿಲ್.. ಐಟಿ ಅಧಿಕಾರಿಗಳ ದಂಡದಿಂದ ದಂಗಾದ ಹೋಟೆಲ್ ಮಾಲೀಕ! - ಐಟಿ
ಎರಡು ಬಾಣೆಹಣ್ಣಿಗೆ ದುಬಾರಿ ಬಿಲ್ ನೀಡಿದ್ದಕ್ಕಾಗಿ ತೆರಿಗೆ ಅಧಿಕಾರಿಗಳು (ಐಟಿ) ವಿನಾಯಿತಿ ಪಡೆದ ವಸ್ತುವಿನ ಮೇಲೆ ತೆರಿಗೆ ಸಂಗ್ರಹಿಸುವ ಮೂಲಕ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಪಂಚತಾರಾ ಹೋಟೆಲ್ಗೆ 25,000 ರೂ. ದಂಡ ವಿಧಿಸಿದ್ದಾರೆ.
ತೆರಿಗೆ ಅಧಿಕಾರಿಗಳು ವಿನಾಯಿತಿ ಪಡೆದ ವಸ್ತುವಿನ ಮೇಲೆ ತೆರಿಗೆ ಸಂಗ್ರಹಿಸುವ ಮೂಲಕ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಪಂಚತಾರಾ ಹೋಟೆಲ್ಗೆ 25,000 ರೂ. ದಂಡ ವಿಧಿಸಿದ್ದಾರೆ.
ರಾಹುಲ್ ಬೋಸ್ ಸಿನಿಮಾವೊಂದರ ಚಿತ್ರೀಕರಣ ನಿಮಿತ್ತ ಚಂಡೀಗಢದಲ್ಲಿ ಪಂಚತಾರಾ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಜಿಮ್ ವರ್ಕ್ಔಟ್ ಮಾಡುವಾಗ ಎರಡು ಬಾಳೆಹಣ್ಣು ತರಿಸಿಕೊಂಡಿದ್ದರು. ಅದಕ್ಕೆ ಆ ಹೋಟೆಲ್ ₹ 442 ಬಿಲ್ ಮಾಡಿತ್ತು.ಹೋಟೆಲ್ನವರು ಕೊಟ್ಟ ಬಿಲ್ ನೋಡಿದ ರಾಹುಲ್ ಒಂದು ವಿಡಿಯೋ ಮಾಡಿ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಪಂಚತಾರಾ ಹೋಟೆಲ್ಗೆ ಈಗ ಮುಳುವಾಗಿದೆ.