ನವದೆಹಲಿ:ಭಾರತೀಯರು ಉಳಿತಾಯ ಮಾಡುವ ಪ್ರತಿ100 ರೂಪಾಯಿಯಲ್ಲಿ,10 ರೂಪಾಯಿ ಎಲ್ಐಸಿಗೆ ಹೋಗುತ್ತಿದೆ. ಇದರಿಂದ ಎಸ್ಬಿಐನಲ್ಲಿ ಇಡುವ ಠೇವಣಿಗಿಂತ ಎಲ್ಐಸಿಯಲ್ಲಿಯೇ ಹೆಚ್ಚಾಗಿದೆ ಎಂದು ವಿದೇಶಿ ಬ್ರೋಕರೇಜ್ ಯುಬಿಎಸ್ನ ವರದಿಯಲ್ಲಿ ಹೇಳಲಾಗಿದೆ.
ಭಾರತೀಯರ ಬಹುಪಾಲು ಉಳಿತಾಯದ ಹಣ ಎಲ್ಐಸಿಯ ಪಾಲಾಗುತ್ತಿದೆ. ಉದಾಹರಣೆಗೆ 100 ರೂ. ಉಳಿತಾಯ ಮಾಡಿದ್ರೆ, ಶೇ.10ರಷ್ಟು ಎಲ್ಐಸಿಗೆ ಹೋಗುತ್ತಿದೆ. ಎಲ್ಐಸಿ ಎಸ್‌ಬಿಐನ ಠೇವಣಿಗಿಂತ ಮುನ್ನಡೆ ಕಾಯ್ದುಕೊಂಡಿದೆ.
ಎಲ್ಐಸಿ ಐಪಿಒಗಾಗಿ SEBIಗೆ ಕರಡು ಪ್ರತಿಗಳನ್ನು ಸಲ್ಲಿಕೆ ಮಾಡಿದ್ದು, ಇದು ದೇಶದ ಅತೀದೊಡ್ಡ ಐಪಿಒ ಆಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವಾಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿ ತಲುಪಲು ಈ ಐಪಿಒ ನಿರ್ಣಾಯಕವಾಗಲಿದೆ.
ಇದನ್ನೂ ಓದಿ:ಕ್ರಿಪ್ಟೋ ನಿಷೇಧಿಸುವುದು ಭಾರತದ ಮಟ್ಟಿಗೆ ಉತ್ತಮ ಆಯ್ಕೆ: ಆರ್ಬಿಐ ಡೆಪ್ಯುಟಿ ಗವರ್ನರ್
2021 ಎಲ್ಐಸಿಯೂ ದಾಖಲೆ ಮಟ್ಟದಲ್ಲಿ ಬಂಡವಾಳ - ಸಂಗ್ರಹವನ್ನು ಮಾಡಿದೆ. 2021 ರಲ್ಲಿ ಶೇ.32 ರಷ್ಟು ಚಿಲ್ಲರೆ ಹೂಡಿಕೆದಾರರು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಶೇ.21ರಷ್ಟು IPO ಚಂದಾದಾರಿಕೆಯನ್ನು ಹೊಂದಿದ್ದಾರೆ.
ಭಾರತೀಯ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ (SEBI) ನ ಮಾರ್ಗಸೂಚಿಗಳ ಪ್ರಕಾರ, ನಿರಂತರ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ 2 ವರ್ಷಗಳಲ್ಲಿ 10 ಪ್ರತಿಶತದಷ್ಟು ಮತ್ತು 5 ವರ್ಷಗಳಲ್ಲಿ 25 ಪ್ರತಿಶತದಷ್ಟು ಸಾರ್ವಜನಿಕ ಷೇರುಗಳನ್ನು ಅನುಮತಿಸಲು ಸರ್ಕಾರವು ತನ್ನ LIC ಪಾಲನ್ನು ಕಡ್ಡಾಯವಾಗಿ ದುರ್ಬಲಗೊಳಿಸಬೇಕಾಗುತ್ತದೆ ಎಂದು ಯುಬಿಎಸ್ ಹೇಳಿದೆ.
ಎಲ್ಐಸಿಯು ಭಾರತೀಯ ಈಕ್ವಿಟಿಗಳಲ್ಲಿ ಸುಮಾರು 4 ಪ್ರತಿಶತ ಪಾಲನ್ನು ಹೊಂದಿದೆ. ಇದು ಸರ್ಕಾರದ ಅತಿದೊಡ್ಡ ಷೇರುದಾರನಾಗಿದೆ. ಎಲ್ಐಸಿ ಐಪಿಒಗಾಗಿ ಡ್ರಾಫ್ಟ್ ಪ್ರಾಸ್ಪೆಕ್ಟಸ್ ಅನ್ನು ಈಗಾಗಲೇ ಸಲ್ಲಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಎಲ್ಐಸಿ ಐಪಿಒ ಮಾರುಕಟ್ಟೆಗೆ ಬರಲಿದೆ.