ಕರ್ನಾಟಕ

karnataka

ETV Bharat / business

ಕೃಪೆಯಾ ಧ್ಯಾನ್‌ ದೀಜಿಯೇ.. ರೈಲ್ವೆ ಇಲಾಖೆಯ 9,000 ಹುದ್ದೆ ಭರ್ತಿ ಶೀಘ್ರ.. ಉದ್ಯೋಗಾಸ್ತರೇ ರೆಡಿಯಾಗಿ.. -

ರೈಲ್ವೆ ರಕ್ಷಣಾ ಪಡೆ (ಆರ್​ಪಿಎಫ್​) ಮಹಿಳಾ ಭದ್ರತಾ ಸಿಬ್ಬಂದಿ ಕಡಿಮೆ ಇರುವುದಾಗಿ ಗಮನಕ್ಕೆ ತಂದಿದೆ. ಅದಕ್ಕಾಗಿ, ರೈಲ್ವೆಯು ಒಟ್ಟು 9,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಇದರಲ್ಲಿ ಶೇ 50ರಷ್ಟು (4,500) ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಗೋಯಲ್​ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jun 29, 2019, 9:47 PM IST

ನವದೆಹಲಿ:ಕೇಂದ್ರ ಸರ್ಪಕಾರವು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9,000ಹುದ್ದೆಗಳನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್​ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರೈಲ್ವೆ ರಕ್ಷಣಾ ಪಡೆ (ಆರ್​ಪಿಎಫ್​) ಮಹಿಳಾ ಭದ್ರತಾ ಸಿಬ್ಬಂದಿ ಕಡಿಮೆ ಇರುವುದಾಗಿ ಗಮನಕ್ಕೆ ತಂದಿದೆ. ಅದಕ್ಕಾಗಿ, ರೈಲ್ವೆಯು ಒಟ್ಟು 9,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಇದರಲ್ಲಿ ಶೇ 50ರಷ್ಟು (4,500) ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಆರ್​ಪಿಎಫ್​ನ ಒಟ್ಟು ಸಿಬ್ಬಂದಿಯಲ್ಲಿ ಶೇ. 2.25ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ಇದು ಇಡೀ ರೈಲ್ವೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಹಿಳೆ ಇರುವ ವಿಭಾಗವಾಗಿದೆ. ಇದನ್ನೇ ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ಅವರ ನಿರ್ದೇಶನ ನೀಡಿದ್ದಾರೆ ಎಂದು ಸಂಸತ್​ನಲ್ಲಿ ಪ್ರಶ್ನೋತ್ತರ ವೇಳೆ ಗೋಯಲ್​ ಉತ್ತರಿಸಿದ್ದಾರೆ.

ಈ ಬಗ್ಗೆ ಟ್ಟೀಟ್​ ಕೂಡ ಮಾಡಿದ ಸಚಿವರು, 'ರೈಲ್ವೆ ಇಲಾಖೆಯು 9,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಇದರಲ್ಲಿ ಕಾನ್​ಸ್ಟೆಬಲ್​ ಹಾಗೂ ಸಬ್ ಇನ್​ಸ್ಪೆಕ್ಟರ್​ ಹಾಗೂ ಶೇ. 50ರಷ್ಟು ಮಹಿಳೆಯರು ಇರಲಿದ್ದಾರೆ. ರೈಲ್ವೆ ಭದ್ರತಾ ಪಡೆಯಲ್ಲಿ ಮಹಿಳೆಯ ಸಂಖ್ಯೆ ವೃದ್ಧಿಸಲಾಗುವುದು' ಎಂದು ಬರೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details