ಕರ್ನಾಟಕ

karnataka

ETV Bharat / business

ರೋಲೆಕ್ಸ್​ ರಿಂಗ್ಸ್​​ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ - Rolex Rings latest news

ಬಿಎಸ್​ಸಿ ಹಾಗೂ ನಿಫ್ಟಿಯಲ್ಲಿ ಸೋಮವಾರ ರೊಲೆಕ್ಸ್​ ರಿಂಗ್​ ಲಿಮಿಟೆಡ್​ ಷೇರುಗಳು ಲಿಸ್ಟ್​ ಆದವು. ಷೇರುಪೇಟೆ ಪ್ರವೇಶಿಸಿದ ಮೊದಲ ದಿನವೇ ರೋಲೆಕ್ಸ್​ ರಿಂಗ್​ ಶೇ 39ರಷ್ಟು ಏರಿಕೆ ದಾಖಲಿಸಿ ಭರ್ಜರಿ ಎಂಟ್ರಿ ಕೊಟ್ಟಿದೆ.

Rolex Rings shares list with 39% premium
ರೋಲೆಕ್ಸ್ ರಿಂಗ್ಸ್

By

Published : Aug 9, 2021, 8:04 PM IST

ನವದೆಹಲಿ: ಆಟೋ ಬಿಡಿಭಾಗಗಳ ತಯಾರಕ ಸಂಸ್ಥೆ ರೋಲೆಕ್ಸ್​​ ರಿಂಗ್ಸ್​ ಲಿಮಿಟೆಡ್​ ಐಪಿಒ ಇಂದು ಅಧಿಕೃತವಾಗಿ ಷೇರುಪೇಟೆಯಲ್ಲಿ ಲಿಸ್ಟ್​ ಆಗಿದ್ದು, ಲಿಸ್ಟ್​ ಆದ ಮೊದಲ ದಿನವೇ ಭರ್ಜರಿ ವಹಿವಾಟು ನಡೆಸಿದೆ.

ಷೇರುಪೇಟೆ ಪ್ರವೇಶಿಸಿದ ರೋಲೆಕ್ಸ್​ ರಿಂಗ್ಸ್ ಲಿಮಿಟೆಡ್​ ಕಂಪನಿ ಸಾವರ್ಜನಿಕರಿಂದ 880- 900 ರೂ.ಗೆ ಷೇರುದಾರರಿಗೆ ಆಫರ್​ ಮಾಡಿತ್ತು. ಇಂದು ಕಂಪನಿ ಲಿಸ್ಟ್​ ಆಗಿದ್ದು, ಇಂದಿನ ಆರಂಭಿಕ ವ್ಯವಹಾರದಲ್ಲಿ 1249 ರೂಗೆ ಲಿಸ್ಟ್​ ಆಗಿತ್ತು. ದಿನದ ವಹಿವಾಟು ಆರಂಭಿಸಿದ ರೋಲೆಕ್ಸ್​ ರಿಂಗ್ಸ್​ ಲಿಮಿಟೆಡ್​ ಷೇರು, ಶೇ 39ರಷ್ಟು ಜಿಗಿತ ಕಾಣುವ ಮೂಲಕ 1264 ರೂ ವರೆಗೆ ವಹಿವಾಟು ನಡೆಸಿತು.

ಗುಜರಾತ್​ನ ಈ ಕಂಪನಿ 731 ಕೋಟಿ ರೂ.ಗಾಗಿ ಐಪಿಒ ಬಿಡುಗಡೆ ಮಾಡಿತ್ತು. ಸುಮಾರು 880-990 ರೂಗೆ ಬಿಡ್​ ನಿಗದಿ ಮಾಡಿತ್ತು. ಸುಮಾರು 130 ಪಟ್ಟಿಗೂ ಹೆಚ್ಚು ಬಿಡ್​ ಮಾಡುವ ಮೂಲಕ ಕಂಪನಿ ಬಂಡವಾಳ 3090 ಕೋಟಿಗೆ ಏರಿಕೆ ಆಗಿದೆ.

ABOUT THE AUTHOR

...view details