ನವದೆಹಲಿ:ಸಾಲ ಮರುಪಾವತಿ ಮೇಲ್ವಿಚಾರಣೆಯ ಸಮಿತಿಯ ಮುಖ್ಯಸ್ಥರಾಗಿ ಕೆ.ವಿ.ಕಾಮತ್ ಅವರನ್ನು ನೇಮಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಬ್ಯಾಂಕ್ ನೌಕರರ ಒಕ್ಕೂಟ ಎಐಬಿಇಎ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಒತ್ತಾಯಿಸಿದೆ.
ಚಂದಾ ಕೊಚ್ಚರ್ ವಿರುದ್ಧದ ಪ್ರಕರಣದ ಎಫ್‌ಐಆರ್‌ನಲ್ಲಿ ಕೆ.ವಿ.ಕಾಮತ್ ಹೆಸರು ಕೇಳಿ ಬಂದಿರುವ ಹಿನ್ನೆಲೆ ಎಐಬಿಇಎ ಈ ಶಿಫಾರಸು ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಸಿಬಿಐ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಚಂದಾ ಕೊಚ್ಚರ್ ಅವರ ಹೆಸರಿನೊಂದಿಗೆ ಕಾಮತ್ ಹೆಸರು ಕೂಡಾ ಕಾಣಿಸಿಕೊಂಡಿದೆ.
ಚಂದಾ ಕೊಚ್ಚರ್ ಅಧಿಕಾರಾವಧಿಯಲ್ಲಿ, ವಿಡಿಯೋಕಾನ್ ಗ್ರೂಪ್ ಮತ್ತು ಅದರ ಸಂಬಂಧಿತ ಕಂಪನಿಗಳಿಗೆ ಕ್ವಿಡ್ ಪ್ರೋ ಆಧಾರದ ಮೇಲೆ 1,875 ಕೋಟಿ ರೂ.ಗಳ ಸಾಲಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೆ.ವಿ.ಕಾಮತ್ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೆಲವು ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
"ಕೆ.ವಿ.ಕಾಮತ್ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷರಲ್ಲದೇ, ಸಾಲವನ್ನು ಅನುಮೋದಿಸಿದ ಸಮಿತಿಯ ಸದಸ್ಯರೂ ಆಗಿದ್ದರು. ಹೀಗಾಗಿ ಅದು ಪ್ರಶ್ನಾರ್ಹವಾಗಿದ್ದು, ತನಿಖೆಯಲ್ಲಿದೆ. ಆದ್ದರಿಂದ, ಈ ಹಂತದಲ್ಲಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದನ್ನು ಮರುಪರಿಶೀಲಿಸಬೇಕು"ಎಂದು ಎಐಬಿಇಎ ತನ್ನ ಮನವಿಯಲ್ಲಿ ತಿಳಿಸಿದೆ.