ನವದೆಹಲಿ:ಆಹಾರ ಬೆಲೆಗಳು ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 5.03ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 4.06ರಷ್ಟಿತ್ತು.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ಬಾಸ್ಕೆಟ್ನಲ್ಲಿನ ಬೆಲೆ ಏರಿಕೆಯ ಪ್ರಮಾಣವು ಫೆಬ್ರವರಿಯಲ್ಲಿ ಶೇ 3.87ಕ್ಕೆ ತಲುಪಿದ್ದು, ಹಿಂದಿನ ತಿಂಗಳಲ್ಲಿ ಇದು ಶೇ 1.89ರಷ್ಟಿತ್ತು. 'ಇಂಧನ ಮತ್ತು ವಿದ್ಯುತ್' ವಿಭಾಗದಲ್ಲಿ ಹಣದುಬ್ಬರವು ಜನವರಿಯಲ್ಲಿ ಶೇ 3.87ರಷ್ಟಿದ್ದು, ಫೆಬ್ರವರಿಯಲ್ಲಿ ಶೇ 3.53ಕ್ಕೆ ತಲುಪಿದೆ.