ಕರ್ನಾಟಕ

karnataka

ETV Bharat / business

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.59ಕ್ಕೆ ಕುಸಿತ - ಗ್ರಾಹಕ ಬೆಲೆ ಸೂಚ್ಯಂಕ

ಕೋವಿಡ್ ಬಿಕ್ಕಟ್ಟು ಹಿನ್ನೆಲೆ ಚಿಲ್ಲರೆ ಹಣದುಬ್ಬರದಲ್ಲಿ ಭಾರಿ ಕುಸಿತ ಕಂಡಿದ್ದು, ಈ ಬಗ್ಗೆ ಎನ್​ಎಸ್​ಒ ದತ್ತಾಂಶ ಬಿಡುಗಡೆ ಮಾಡಿದೆ.

Retail inflation
ಚಿಲ್ಲರೆ ಹಣದುಬ್ಬರ

By

Published : Aug 12, 2021, 7:06 PM IST

ನವದೆಹಲಿ: ಜೂನ್ 2021 ರಲ್ಲಿ ಶೇಕಡಾ 6.26 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇಕಡಾ 5.59ಕ್ಕೆ ಇಳಿದಿದೆ. ರಾಷ್ಟ್ರೀಯ ಅಂಕಿ - ಅಂಶಗಳ ಕಚೇರಿ (NSO) ಇಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕವು (CPI) ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡೂ ಕಡೆ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಇದರೊಂದಿಗೆ, ಗ್ರಾಹಕರ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಆರಾಮ ವಲಯ(Comfort Zone)ದಲ್ಲಿ ಕುಸಿದಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ 422 ರೂ. ಏರಿಕೆ.. ಸತತ ಇಳಿಕೆ ನಂತರ ಶಾಕ್​ ನೀಡಿದ ಹಳದಿ ಲೋಹ!

ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4 ರಂತೆ ಕಾಯ್ದಿರಿಸಿಕೊಳ್ಳಲು ಆರ್​ಬಿಐಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕಳೆದ ವಾರ ಕೇಂದ್ರೀಯ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಚಿಲ್ಲರೆ ಹಣದುಬ್ಬರದ ಪ್ರಕ್ಷೇಪಣವನ್ನು ಪೂರೈಕೆ ಅಡೆ ತಡೆಗಳು, ಕಚ್ಚಾ ತೈಲ ಬೆಲೆಗಳು ಮತ್ತು ಕಚ್ಚಾ ವಸ್ತುಗಳ ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಶೇಕಡಾ 5.7ಕ್ಕೆ ಏರಿಕೆ ಕಂಡಿದೆ.

ABOUT THE AUTHOR

...view details