ಮುಂಬೈ:ಕೇಂದ್ರೀಯ ಬ್ಯಾಂಕ್ ನೀಡಿರುವ ನಿರ್ದೇಶನ ಪಾಲಿಸದ ಕಾರಣ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) 1 ಕೋಟಿ ರೂಪಾಯಿ ದಂಡ ವಿಧಿಸಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್ಬಿಐಗೆ ನೀಡದಿರುವುದು ಮತ್ತು ಕೇಂದ್ರ ಬ್ಯಾಂಕ್ನ ನಿಯಮಗಳನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಈ ದಂಡ ಹಾಕಲಾಗಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಸೆಕ್ಷನ್ 46 (4) (i) ಮತ್ತು 51 (1) ರೊಂದಿಗೆ ಕಲಂ 47 ಎ (1) (ಸಿ) ನ ನಿಯಮಗಳ ಅಡಿ ಆರ್ಬಿಐಗೆ ನೀಡಲಾದ ಅಧಿಕಾರದ ಅಡಿ ಈ ದಂಡ ಹಾಕಲಾಗಿದೆ.
ಎಸ್ಬಿಐನಲ್ಲಿ ನಿರ್ವಹಿಸಲಾದ ಗ್ರಾಹಕರ ಖಾತೆ ಪರಿಶೀಲಿಸಿದ ನಂತರ, ಕೇಂದ್ರೀಯ ಬ್ಯಾಂಕ್ ಖಾತೆಯಲ್ಲಿನ ವಂಚನೆಯ ವರದಿ ವಿಳಂಬ ಮಾಡಿರುವುದು ಪತ್ತೆಯಾಗಿದೆ. ಈ ವೇಳೆ, ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವ ಉಚ್ಚರಿಸಲು ಉದ್ದೇಶಿಸಿಲ್ಲ ಎಂದು ಹೇಳಿಕೊಂಡಿದೆ.