ಕರ್ನಾಟಕ

karnataka

ETV Bharat / business

ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದ ಪೂರ್ಣಗೊಳಿಸಲು ಮುಂದಾದ ಆರ್‌ಆರ್‌ವಿಎಲ್ - Reliance Media Statement

ಫ್ಯೂಚರ್ ಗ್ರೂಪ್‌ನ ಪ್ರವರ್ತಕರೊಂದಿಗೆ ಷೇರುದಾರರ ಒಪ್ಪಂದದ ಪ್ರಕಾರ ಅಮೆಜಾನ್ ಕೋರಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ತುರ್ತು ಮಧ್ಯಸ್ಥಿಕೆದಾರರು ನೀಡಿರುವ ಮಧ್ಯಂತರ ಆದೇಶದ ಬಗ್ಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ (ಆಆರ್‌ವಿಎಲ್) ಮಾಹಿತಿ ನೀಡಲಾಗಿದೆ.

Reliance Media Statement on Interim Order
ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದ ಪೂರ್ಣಗೊಳಿಸಲು ಮುಂದಾದ ಆರ್‌ಆರ್‌ವಿಎಲ್

By

Published : Oct 27, 2020, 12:09 PM IST

ಮುಂಬೈ: ಫ್ಯೂಚರ್ ಗ್ರೂಪ್‌ನ ಪ್ರವರ್ತಕರೊಂದಿಗೆ ಷೇರುದಾರರ ಒಪ್ಪಂದದ ಪ್ರಕಾರ ಅಮೆಜಾನ್ ಕೋರಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ತುರ್ತು ಮಧ್ಯಸ್ಥಿಕೆದಾರರು ನೀಡಿರುವ ಮಧ್ಯಂತರ ಆದೇಶದ ಬಗ್ಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ (ಆಆರ್‌ವಿಎಲ್) ಮಾಹಿತಿ ನೀಡಲಾಗಿದೆ.

ಪತ್ರಿಕಾ ಪ್ರಕಟಣೆ

ಈ ಕುರಿತು ಆರ್‌ಆರ್‌ವಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಫ್ಯೂಚರ್ ರಿಟೇಲ್ ಲಿಮಿಟೆಡ್‌ನ ಆಸ್ತಿ ಮತ್ತು ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವ ವಹಿವಾಟನ್ನು ಆರ್‌ಆರ್‌ವಿಎಲ್ ಸರಿಯಾದ ಕಾನೂನು ಸಲಹೆಯ ಮೇರೆಗೆ ಪ್ರಾರಂಭಿಸಿದೆ ಹಾಗೂ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಭಾರತೀಯ ಕಾನೂನಿನಡಿ ಸಂಪೂರ್ಣವಾಗಿ ಜಾರಿಗೊಳಿಸಬಹುದಾಗಿದೆ. ಯಾವುದೇ ವಿಳಂಬವಿಲ್ಲದೆ ತನ್ನ ಹಕ್ಕುಗಳನ್ನು ಜಾರಿಗೊಳಿಸಲು ಹಾಗೂ ಕಾರ್ಯಯೋಜನೆ ಮತ್ತು ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ವಹಿವಾಟನ್ನು ಪೂರ್ಣಗೊಳಿಸಲು ಆರ್‌ಆರ್‌ವಿಎಲ್ ಉದ್ದೇಶಿಸಿದೆ.

ABOUT THE AUTHOR

...view details