ಕರ್ನಾಟಕ

karnataka

By

Published : Oct 21, 2020, 10:48 AM IST

ETV Bharat / business

ದೀಪಾವಳಿಗೆ ಬಂಪರ್: ರಿಲಯನ್ಸ್​ ಜುವೆಲ್ಸ್​ನಿಂದ 'ಉತ್ಕಲಾ' ಚಿನ್ನಾಭರಣ ಸಂಗ್ರಹ

ಭಾರತದ ಜನಪ್ರಿಯ ಆಭರಣಗಳ ಬ್ರ್ಯಾಂಡ್ ಆದ ರಿಲಯನ್ಸ್ ಜ್ಯುವೆಲ್ಸ್ ಈ ಹಬ್ಬದ ಋತುವಿನ ಆರಂಭವನ್ನು ಇನ್ನಷ್ಟು ಚೆಂದವಾಗಿಸಲು ‘ಉತ್ಕಲಾ’ ಎಂಬ ಉತ್ಕೃಷ್ಟ ಆಭರಣಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ.

ರಿಲಯನ್ಸ್​ ಜುವೆಲ್ಸ್​
ರಿಲಯನ್ಸ್​ ಜುವೆಲ್ಸ್​

ದೀಪಾವಳಿ ಹಬ್ಬದ ಸಡಗರದಲ್ಲಿ ರಿಲಯನ್ಸ್ ಜ್ಯುವೆಲ್ಸ್ ಹೊಸ ‘ಉತ್ಕಲಾ’ ಸಂಗ್ರಹವನ್ನು ಅನಾವರಣಗೊಳಿಸುತ್ತಿದೆ. ಒಡಿಶಾದ ಅನನ್ಯವಾದ ಕಲಾತ್ಮಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿಗೊಂಡ ಚಿನ್ನ ಮತ್ತು ವಜ್ರಾಭರಣಗಳ ಉತ್ಕೃಷ್ಟವಾದ ಶ್ರೇಣಿ ಇದಾಗಿದೆ.

ಭಾರತದ ಅತ್ಯಂತ ವಿಶ್ವಸನೀಯ ಆಭರಣಗಳ ಬ್ರ್ಯಾಂಡ್ ಆದ ರಿಲಯನ್ಸ್ ಜ್ಯುವೆಲ್ಸ್ ಈ ಹಬ್ಬದ ಋತುವಿನ ಆರಂಭವನ್ನು ಇನ್ನಷ್ಟು ಚೆಂದವಾಗಿಸಲು ‘ಉತ್ಕಲಾ’ ಎಂಬ ಉತ್ಕೃಷ್ಟ ಆಭರಣಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ. ಈ ಸಂಗ್ರಹವು ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದ್ದು, ರಾಜ್ಯದ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅದ್ಭುತವಾಗಿ ಮೇಳೈಸಿದ ಅನನ್ಯವಾದ ಚಿತ್ರಕಲೆ, ಕಲಾಕೃತಿಗಳು ಮತ್ತು ವಿನ್ಯಾಸಗಳ ನೈಜ ಸಂಗಮವಾಗಿದೆ.

'ಉತ್ಕಲಾ' ಚಿನ್ನಾಭರಣ ಸಂಗ್ರಹ

ಈ ಉತ್ಕೃಷ್ಟವಾದ ಸಂಗ್ರಹವು ಅದ್ಭುತವಾದ ವಿನ್ಯಾಸಗಳನ್ನು ಹೊಂದಿದ್ದು, ಗ್ರಾಹಕರು ವೈವಿಧ್ಯಮಯವಾದ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ರಚಿಸಲಾದ ಆಭರಣಗಳನ್ನು ಕಾಣಬಹುದು. ಈ ಸುಗಮವಾದ ಕಲೆಗೆ ಕೋನಾರ್ಕ್ ಸೂರ್ಯ ದೇವಾಲಯ, ಮುಕ್ತೇಶ್ವರ ದೇವಾಲಯ, ಪುರಿ ಜಗನ್ನಾಥ ದೇವಾಲಯ, ಸೀತಿ ನಾಟ್ಯ, ವಿನೂತನವಾದ ಪಟ್ಟಚಿತ್ರ ಕಲಾಕೃತಿಗಳು ಮತ್ತು ಬಾಯ್ತಾ ಬಂಧನ ಕಡಲ ಪರಂಪರೆಗಳು ಸ್ಫೂರ್ತಿ ನೀಡಿವೆ.

ರಿಲಯನ್ಸ್ ಜ್ಯುವೆಲ್ಸ್​ನ ಉತ್ಕಲಾ ಸಂಗ್ರಹದ ಒಂದು ಕಿರುನೋಟ

ಚೋಕರ್ ಸೆಟ್​ನಿಂದ ಚಿಕ್ಕ ನೆಕ್ಲೇಸ್, ಉದ್ದನೆಯ ಸೂಕ್ಷ್ಮವಾದ ಮತ್ತು ಉತ್ಕೃಷ್ಟವಾದ ನೆಕ್ಲೇಸ್ ಸೆಟ್​ವರೆಗೆ, ಇಲ್ಲಿ ಎಲ್ಲಾ ಸಂದರ್ಭಗಳಿಗೂ ಒದಗುವ ಮತ್ತು ಎಲ್ಲರಿಗೂ ಎಟುಕುವ ದರಗಳಲ್ಲಿ ಆಭರಣಗಳಿವೆ. ಚಿನ್ನದ ಸಂಗ್ರಹದ ವಿನ್ಯಾಸಗಳನ್ನು 22ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, ಪ್ರಾಚೀನ ಮತ್ತು ಹಳದಿ ಚಿನ್ನದ ಫಿನಿಶ್‍ಗಳ ಅದ್ಭುತವಾದ ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನು ಹೊಂದಿದೆ. ಹಳದಿ ಚಿನ್ನ ಮತ್ತು ಪ್ರಾಚೀನ ಫಿನಿಶ್​ನಲ್ಲಿ ಸೂಕ್ಷ್ಮವಾದ ಫಿಲಿಗ್ರಿ ಮಾದರಿಯ ಆಭರಣಗಳೂ ಇವೆ. 18 ಕೆಟಿ ಚಿನ್ನದಲ್ಲಿ ಡೈಮಂಡ್ ಅನ್ನು ಪೋಣಿಸಲಾಗಿದ್ದು ಹಬ್ಬದ ಸಂದರ್ಭದಲ್ಲಿ ಮತ್ತು ಸಮಕಾಲೀನ ನೋಟಕ್ಕೆ ಇದು ಹೆಚ್ಚು ಸೂಕ್ತವಾಗಿದೆ.

ಈ ಕುರಿತು ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ವಕ್ತಾರರು "ಭಾರತದಲ್ಲಿ ಸಂಭ್ರಮಿಸಲಾಗುವ ಅತ್ಯಂತ ಮುಖ್ಯವಾದ ಹಬ್ಬಗಳಲ್ಲಿ ದೀಪಾವಳಿ ಒಂದು. ಧನ್ತೇರಸ್​ಗೆ ಚಿನ್ನದ ಆಭರಣಗಳನ್ನು ಕೊಳ್ಳುವುದು ಶ್ರೇಷ್ಠವೆಂದು ಪರಿಗಣಿಸಲಾಗುವುದು. ನಮ್ಮ ದೇವಾಲಯಗಳ ಡಿಸೈನ್​ಗಳನ್ನು ಆಭರಣದ ವಿನ್ಯಾಸದ ಮೇಲೆ ಬಿಡಿಸುವ ಪರಂಪರೆಯನ್ನು ಮುಂದುವರೆಸುವ ಅದ್ಭುತವಾದ ಸಂಗ್ರಹವಿದು. ಪ್ರತಿ ಚಿನ್ನದ ಮತ್ತು ವಜ್ರದ ನೆಕ್ಲೇಸ್, ಓಲೆಗಳು ಮತ್ತು ಸೆಟ್​ಗಳು ಅನನ್ಯವಾಗಿದ್ದು, ಒಡಿಶಾದ ವಿಭಿನ್ನವಾದ ಕಲೆ ಮತ್ತು ಇತಿಹಾಸವನ್ನು ಪ್ರತಿನಿಧಿಸುತ್ತದೆ. ಧನ್ತೇರಾಸ್​ನ ಹಬ್ಬದ ಶುಭ ಸಮಯದಲ್ಲಿ ಈ ಸಂಗ್ರಹವನ್ನು ನೀಡುವುದರಿಂದ ಇದು ವಿಶೇಷವಾಗಿದೆ. ನಮ್ಮ ಅಭಿಮಾನಿಗಳು ಇದನ್ನು ಧರಿಸಿ, ಎಲ್ಲರಿಗೂ ಸ್ಮರಣೀಯರಾಗಿತ್ತಾರೆಂದು ಆಶಿಸುತ್ತೇವೆ” ಎಂದಿದ್ದಾರೆ.

ಉತ್ಕಲಾ ಸಂಗ್ರಹದಲ್ಲಿ ಪ್ರತಿ ಆಭರಣವೂ ಒಂದು ನಿಪುಣ ಕಲಾಚಾತುರ್ಯದ ಗುರುತಾಗಿದ್ದು, ರಿಲಯನ್ಸ್ ಜ್ಯುವೆಲ್ಸ್ ಬ್ರ್ಯಾಂಡ್​ನ ನಿರಂತರ ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದೆ. ಉತ್ಕಲಾ ಸಂಗ್ರಹವು ಭಾರತದಾದ್ಯಂತ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಅಕ್ಟೋಬರ್ 17ರಿಂದ ಲಭ್ಯವಿರುತ್ತದೆ. ಇದಲ್ಲದೆ, 16 ನವೆಂಬರ್ 2020ವರೆಗೆ, ಚಿನ್ನಾಭರಣಗಳು ಮತ್ತು ಚಿನ್ನದ ನಾಣ್ಯಗಳ ತಯಾರಿಕೆ ವೆಚ್ಚಗಳ ಮೇಲೆ 30% ರಷ್ಟು ರಿಯಾಯಿತಿ ಮತ್ತು ವಜ್ರಾಭರಣಗಳ ಮೇಲೆ 30%ವರೆಗೆ ರಿಯಾಯಿತಿ ಎಲ್ಲಾ ಗ್ರಾಹಕರಿಗೂ ನೀಡಲಾಗುತ್ತಿದೆ. ಷರತ್ತುಗಳು, ನಿಯಮ ಅನ್ವಯಿಸುತ್ತವೆ.

ABOUT THE AUTHOR

...view details