ಮುಂಬೈ:ರಿಲಯನ್ಸ್ ಡಿಜಿಟಲ್ ತನ್ನ ಡಿಜಿಟಲ್ ಇಂಡಿಯಾ ಮಾರಾಟದ ವೇಳೆ ಗ್ರಾಹಕರಿಗೆ ಭರ್ಜರಿ ರಿಯಾಯ್ತಿಗಳನ್ನು ಘೋಷಿಸಿದೆ. ಕಂಪನಿಯ ಪ್ರಕಾರ, ಗ್ರಾಹಕರು ಟಿವಿ, ಗೃಹೋಪಯೋಗಿ ವಸ್ತುಗಳು(ಹೋಮ್ ಅಪ್ಲೈಯನ್ಸ್‌ಗಳು), ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳಂತಹ ವಿಶಾಲ ಶ್ರೇಣಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವಿಶೇಷ ಕೊಡುಗೆಗಳನ್ನು ಪಡೆಯಬಹುದಾಗಿದೆ.
Reliance Digital ಇಂಡಿಯಾ ಬಿಗ್ ಸೇಲ್: ವಿಶೇಷ ಕೊಡುಗೆಗಳ ಘೋಷಣೆ, ಟಿವಿ, ಲ್ಯಾಪ್ಟಾಪ್ನಲ್ಲಿ ಭಾರಿ ರಿಯಾಯ್ತಿ - ಮೈ ಜಿಯೋ ಸ್ಟೋರ್ಸ್
ಟಿವಿ, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ವಿಶಾಲವಾದ ಶ್ರೇಣಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ರಿಲಯನ್ಸ್ ಡಿಜಿಟಲ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಈ ಕೊಡುಗೆಗಳು ಇದೇ ಆಗಸ್ಟ್ 16, ರವರೆಗೆ ಲಭ್ಯವಿದೆ.
ಈ ಮಾರಾಟವು ಎಲ್ಲಾ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಮತ್ತು www.reliancedigital.in ನಲ್ಲಿ ಲೈವ್ ಇರಲಿದೆ. ಗ್ರಾಹಕರು ಆಗಸ್ಟ್ 16 ರವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳ ಮೇಲೆ 10% ತತ್‌ಕ್ಷಣದ ರಿಯಾಯಿತಿ (ರೂ. 3,000 ವರೆಗೆ) ಪಡೆಯಬಹುದು ಎಂದು ಕಂಪನಿಯು 'ಈಟಿವಿ ಭಾರತ' ಜೊತೆ ಮಾಹಿತಿ ಹಂಚಿಕೊಂಡಿದೆ. ಪೇಟಿಎಂ ಮೂಲಕ 9,999 ಟ್ರನ್ಸ್ಕ್ಷನ್ ಮಾಡಿದವರು ಕನಿಷ್ಠ 500 ರೂ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. EMI ಸೌಲಭ್ಯದ ಮೂಲಕ, ZestMoney ಮೂಲಕ ರೂ.10,000 ಕ್ಕಿಂತ ಹೆಚ್ಚಿನ ಖರೀದಿಸಿದ ಗ್ರಾಹಕರು ಶೇ. 10 ರಷ್ಟು ಕ್ಯಾಶ್‌ಬ್ಯಾಕ್ (ರೂ. 5,000 ವರೆಗೆ) ಪಡೆಯಬಹುದು.
ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ -Top deals
- ಟಿವಿಗಳಲ್ಲಿ, ಗ್ರಾಹಕರು ವಿಶಾಲವಾದ ಶ್ರೇಣಿಯ ಸ್ಮಾರ್ಟ್ ಟಿವಿಗಳನ್ನು 13,990 ರೂ.ಗಳಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. Sansui- 50 ಇಂಚಿನ ಅಲ್ಟ್ರಾ HD ಸ್ಮಾರ್ಟ್ ಎಲ್ಇಡಿ ಟಿವಿ 43 ಇಂಚಿನ ರೂಪಾಂತರದ ಬೆಲೆಯಲ್ಲಿ ಲಭ್ಯವಿದೆ (ರೂ. 29,990)
- TCL 55 ಇಂಚಿನ ಅಲ್ಟ್ರಾ HD ಸ್ಮಾರ್ಟ್ ಟಿವಿ ರೂ 44,990 ಕ್ಕೆ ಲಭ್ಯವಿದೆ.ಮತ್ತು ಇದರೊಂದಿಗೆ ರೂ 19,990 ಮೌಲ್ಯದ ಜೆಬಿಎಲ್ ಸೌಂಡ್‌ಬಾರ್ ಉಚಿತವಾಗಿ ಸಿಗಲಿದೆ.
- ವಿವಿಧ ಲ್ಯಾಪ್‌ಟಾಪ್‌ಗಳು ರೂ.16,999 ರಿಂದ ಮತ್ತು ರೂ. 17,990 ವರೆಗಿನ ಬೆಲೆಯಲ್ಲಿ ಲಭ್ಯವಿದೆ. 16 ಜಿಬಿ RAM ಹೊಂದಿರುವ ಪವರ್ಫುಲ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಆರಂಭಿಕ ಬೆಲೆ 64,999 ರೂಗಳಲ್ಲಿ ಲಭ್ಯವಿದೆ. Lenovo M8 32 GB ಟ್ಯಾಬ್ಲೆಟ್ ವಿಶೇಷ ಬೆಲೆಯಲ್ಲಿ ಅಂದರೆ ರೂ.11,499 ಗಳಲ್ಲಿ ಲಭ್ಯವಿದೆ.
- ಮೊಬೈಲ್ ಫೋನ್ ಗಳ ಪೈಕಿ ಒನ್ ಪ್ಲಸ್ ನಾರ್ಡ್ 2 ಸ್ಮಾರ್ಟ್ ಫೋನ್ ರೂ 29,999 ಕ್ಕೆ ಲಭ್ಯವಿದೆ. ಫೈರ್-ಬೋಲ್ಟ್ AGNI ಸ್ಮಾರ್ಟ್ ವಾಚ್ SpO2 ವೈಶಿಷ್ಟ್ಯದೊಂದಿಗೆ ಡಿಜಿಟಲ್ ಇಂಡಿಯಾ ಸೇಲ್ ನಲ್ಲಿ ರೂ.2,699 ಕ್ಕೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಅಲ್ಲದೆ, ಗ್ರಾಹಕರು ಆಯ್ದ ಫೋನ್‌ಗಳ ಖರೀದಿಯಲ್ಲಿ 7,999 ಮೌಲ್ಯದ ಟ್ರೂ ವೈರ್‌ಲೆಸ್ ಬಿಟಿ ಇಯರ್‌ಫೋನ್ ಪಡೆಯುತ್ತಾರೆ.
- ಎಲ್‌ಜಿ, ಸ್ಯಾಮ್‌ಸಂಗ್ ಮತ್ತು ವರ್ಲ್ಪೂಲ್ ರೆಫ್ರಿಜರೇಟರ್‌ಗಳು ರೂ. 23,990 ರಿಂದ ರೂ. 3,850 ಮೌಲ್ಯದ ಉಡುಗೊರೆಗಳೊಂದಿಗೆ ಲಭ್ಯವಿದೆ. ಟಾಪ್ ಲೋಡ್ ವಾಷಿಂಗ್ ಮಷಿನ್ಗಳು ರೂ .1990 ಮೌಲ್ಯದ ಉಡುಗೊರೆಗಳೊಂದಿಗೆ ರೂ .12,990 ದಿಂದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
- ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ಗ್ರಾಹಕರು ರೂ. 1999 ಮೌಲ್ಯದ ವಿದ್ಯುತ್ ಕೆಟಲ್ ಅನ್ನು ಉಚಿತವಾಗಿ ಪಡೆಯಬಹುದು.