ಕರ್ನಾಟಕ

karnataka

ETV Bharat / business

'Hi' ಎಂದು ಟೈಪ್​ ಮಾಡಿ WhatsApp​ ಮೆಸೇಜ್ ಮಾಡಿದ್ರೆ ಕ್ಷಣದಲ್ಲೇ ಜಿಯೋ ರೀಚಾರ್ಜ್: ಯಾವುದೀ ನಂಬರ್​? - ರಿಲಯನ್ಸ್ ಜಿಯೋ ಲೆಟೆಸ್ಟ್​ ಸುದ್ದಿ

ವಾಟ್ಸ್​ಆ್ಯಪ್​ ಬೋಟ್ ಪ್ರವೇಶಿಸಲು, ಬಳಕೆದಾರರು ತಮ್ಮ ಫೋನ್‌ಗಳಲ್ಲಿ 70 00 77 0007 ನಂಬರ್​​ ಸೇವ್​ ಮಾಡಿಕೊಳ್ಳಬೇಕು. ಆ ಸಂಖ್ಯೆಗೆ 'ಹಾಯ್' ಎಂದು ಬರೆದು ಕಳುಹಿಸಬೇಕು. ವಾಟ್ಸ್​ಆ್ಯಪ್​ ಬೋಟ್ ನಂತರ ಸೇವೆಗಳ ಕ್ಯಾಟಲಾಗ್ ತೆರೆಯುತ್ತದೆ. ಇದರಲ್ಲಿ ಜಿಯೋ ಸಿಮ್ ರೀಚಾರ್ಜ್, ಹೊಸ ಜಿಯೋ ಸಿಮ್ ಅಥವಾ ಎಂಎನ್‌ಪಿ ಬಳಸುವ ಪೋರ್ಟ್-ಇನ್, ಜಿಯೋ ಸಿಮ್‌ಗೆ ಬೆಂಬಲ, ಜಿಯೋ ಫೈಬರ್‌ಗೆ ಬೆಂಬಲ, ಅಂತಾರಾಷ್ಟ್ರೀಯ ರೋಮಿಂಗ್‌ಗೆ ಬೆಂಬಲ ಮತ್ತು ಜಿಯೋಮಾರ್ಟ್‌ಗೆ ಬೆಂಬಲದಂತಹ ಫೀಚರ್​​ಗಳು ಲಭ್ಯವಾಗಲಿವೆ.

Reliance Jio
Reliance Jio

By

Published : Jun 10, 2021, 3:21 PM IST

ಮುಂಬೈ: ಈಗ ನೀವು ವಾಟ್ಸ್​ಆ್ಯಪ್​​ನಲ್ಲಿ 'ಹಾಯ್' ಎಂದು ಟೈಪ್ ಮಾಡುವ ಮೂಲಕ ನಿಮ್ಮ ರಿಲಯನ್ಸ್ ಜಿಯೋ ನಂಬರ್​ನ ರೀಚಾರ್ಜ್ ಯೋಜನೆಗಳನ್ನು ಪರಿಶೀಲಿಸಬಹುದು. ರಿಲಯನ್ಸ್ ಜಿಯೋ ಹೊಸ ವಾಟ್ಸ್​ಆ್ಯಪ್​ ಬೋಟ್ ಪ್ರಾರಂಭಿಸಿದ್ದು, ಬಳಕೆದಾರರು ತಮ್ಮ ಖಾತೆಗಳನ್ನು ರೀಚಾರ್ಜ್ ಮಾಡಲು ಅನುಮತಿಸುತ್ತದೆ. ಜೊತೆಗೆ ಹೊಸ ಜಿಯೋ ಸಿಮ್ ಕಾರ್ಡ್ ಪಡೆಯುವ ಅಥವಾ ಹಳೆಯ ಜಿಯೋಗೆ ಪೋರ್ಟ್ ಅಂತಹ ಹಲವು ಸೇವೆಗಳನ್ನು ಒಳಗೊಂಡಿದೆ.

ವಾಟ್ಸ್​ಆ್ಯಪ್​ ಬೋಟ್ ಪ್ರವೇಶಿಸಲು, ಬಳಕೆದಾರರು ತಮ್ಮ ಫೋನ್‌ಗಳಲ್ಲಿ 70 00 77 0007 ನಂಬರ್​​ ಸೇವ್​ ಮಾಡಿಕೊಳ್ಳಬೇಕು. ಆ ಸಂಖ್ಯೆಗೆ 'ಹಾಯ್' ಎಂದು ಬರೆದು ಕಳುಹಿಸಬೇಕು. ವಾಟ್ಸ್​ಆ್ಯಪ್​ ಬೋಟ್ ನಂತರ ಸೇವೆಗಳ ಕ್ಯಾಟಲಾಗ್ ತೆರೆಯುತ್ತದೆ. ಇದರಲ್ಲಿ ಜಿಯೋ ಸಿಮ್ ರೀಚಾರ್ಜ್, ಹೊಸ ಜಿಯೋ ಸಿಮ್ ಅಥವಾ ಎಂಎನ್‌ಪಿ ಬಳಸುವ ಪೋರ್ಟ್-ಇನ್, ಜಿಯೋ ಸಿಮ್‌ಗೆ ಬೆಂಬಲ, ಜಿಯೋ ಫೈಬರ್‌ಗೆ ಬೆಂಬಲ, ಅಂತಾರಾಷ್ಟ್ರೀಯ ರೋಮಿಂಗ್‌ಗೆ ಬೆಂಬಲ ಮತ್ತು ಜಿಯೋಮಾರ್ಟ್‌ಗೆ ಬೆಂಬಲದಂತಹ ಫೀಚರ್​​ಗಳು ಲಭ್ಯವಾಗಲಿವೆ.

ಓದಿ: ಮುಂದಿನ ವರ್ಷದಿಂದ ಸ್ಮಾರ್ಟ್‌ವಾಚ್‌ನಲ್ಲೂ ಫೇಸ್‌ಬುಕ್ ಕಾರ್ಯನಿರ್ವಹಣೆ

ಈ ಸೇವೆಯು ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ, ಹೆಚ್ಚಿನ ಭಾಷೆಗಳನ್ನು ಸೇರಿಸುವ ಸಾಧ್ಯತೆಯಿದೆ. ಜಿಯೋ ಸಿಮ್ ರೀಚಾರ್ಜ್ ಆಯ್ಕೆಯನ್ನು ಆರಿಸುವುದರಿಂದ ಲಭ್ಯವಿರುವ ರೀಚಾರ್ಜ್ ಯೋಜನೆಗಳೊಂದಿಗೆ ಮೆನು ರಚಿಸಲಾಗುತ್ತದೆ. ಯುಪಿಐ, ಇ-ವ್ಯಾಲೆಟ್‌, ಕ್ರೆಡಿಟ್ ಕಾರ್ಡ್‌ ಅಥವಾ ಡೆಬಿಟ್ ಕಾರ್ಡ್‌ಗಳು ಸೇರಿದಂತೆ ವಿವಿಧ ಡಿಜಿಟಲ್ ವಿಧಾನಗಳ ಮೂಲಕ ಪಾವತಿಸಲು ಬಳಕೆದಾರರಿಗೆ ಆಯ್ಕೆಗಳಿವೆ.

ಬೋಟ್ ಮೂಲಕ ಸೇವಾ ದೂರುಗಳನ್ನು ಸಹ ನೀಡಬಹುದು ಮತ್ತು ಅವರಿಗೆ ಪ್ರತಿಕ್ರಿಯೆಗಳನ್ನು ಪಡೆಯಬಹುದು. ಕೋವಿಡ್ -19 ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಮುಖ್ಯ ಮೆನುವಿನಲ್ಲಿ ನೋಡಲು ಬಳಕೆದಾರರಿಗೆ ಅವಕಾಶವಿದೆ. ಬಳಕೆದಾರರು ತಮ್ಮ ಪಿನ್ ಕೋಡ್‌ಗಳನ್ನು ಹಾಕುವ ಮೂಲಕ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಕಾಣಬಹುದು. 'ಲಸಿಕೆ ಮಾಹಿತಿ' ಆಯ್ಕೆಯನ್ನು ಆರಿಸುವುದರಿಂದ ಲಸಿಕೆ ಅರ್ಹತೆ, ಪ್ರಕ್ರಿಯೆ, ಅಡ್ಡಪರಿಣಾಮಗಳು ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಹಲವು ವಿಭಾಗಗಳನ್ನು ತೆರೆಯುತ್ತವೆ.

ABOUT THE AUTHOR

...view details