ಬೀಜಿಂಗ್: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ವ್ಯಾಪಾರ ಒಪ್ಪಂದಕ್ಕೆ ಸೇರ್ಪಡೆಗೊಳ್ಳದಿರುವ ಭಾರತದ ನಿರ್ಧಾರವನ್ನು ಚೀನಾ ಖಂಡಿಸಿದ್ದು, ನವದೆಹಲಿಯ ಕಳವಳಗಳನ್ನು ಪರಿಹರಿಸಲು ಗುಂಪಿನ ಸದಸ್ಯರು ಒಟ್ಟಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದೆ.
ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು.