ಕರ್ನಾಟಕ

karnataka

ETV Bharat / business

RBIನ ಡೆಪ್ಯೂಟಿ ಗವರ್ನರ್​ ಹುದ್ದೆಯಿಂದ ನಿವೃತ್ತರಾದ ಕ್ರಿಯಾತ್ಮಕ ಹಣಕಾಸು ತಜ್ಞ ಕನುಂಗೊ - ಆರ್‌ಬಿಐ ಡೆಪ್ಯೂಟಿ ಗವರ್ನರ್ ಕನುಂಗೊ ನಿವೃತ್ತಿ

ಕೇಂದ್ರ ಬ್ಯಾಂಕರ್ ಆಗಿರುವ ಕನುಂಗೊ ಅವರು 1982ರ ಸೆಪ್ಟೆಂಬರ್​​ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರ್ಪಡೆಯಾದರು. ವಿದೇಶಿ ವಿನಿಮಯ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಮೇಲ್ವಿಚಾರಣೆ, ಕರೆನ್ಸಿ ನಿರ್ವಹಣೆ, ಸರ್ಕಾರ ಮತ್ತು ಬ್ಯಾಂಕ್ ಖಾತೆಗಳು, ಸಾರ್ವಜನಿಕ ಸಾಲ ಮುಂತಾದ ಬ್ಯಾಂಕ್​ಗಳ ಹಲವು ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.

RBI
RBI

By

Published : Apr 2, 2021, 7:56 PM IST

ಮುಂಬೈ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಡೆಪ್ಯೂಟಿ ಗವರ್ನರ್ ಬಿ.ಪಿ.ಕನುಂಗೊ ಅವರ ಅಧಿಕಾರಾವಧಿ ಏಪ್ರಿಲ್ 2ರ ಶುಕ್ರವಾರದಂದು ಮುಕ್ತಾಯಗೊಂಡಿದ್ದರಿಂದ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಕನುಂಗೊ ಅವರು ಏಪ್ರಿಲ್ 2017ರಲ್ಲಿ ಸೆಂಟ್ರಲ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ಅವಧಿ 2020ರ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿತ್ತು. ಆದರೆ, 2020ರ ಏಪ್ರಿಲ್ 3ರಿಂದ ಒಂದು ವರ್ಷದ ಅವಧಿ ತನಕ ಅವರ ಕರ್ತವ್ಯದ ಗಡುವು ವಿಸ್ತರಣೆ ಮಾಡಲಾಯಿತು.

ಇದನ್ನೂ ಓದಿ: ಇಂಡಿಗೊದಿಂದ 'ಡೋರ್ To ಡೋರ್' ಲಗೇಜ್ ವರ್ಗಾವಣೆ ಸೇವೆ: ಯಾವ ಸಿಟಿ, ಶುಲ್ಕ ಎಷ್ಟು ಗೊತ್ತೇ?

ಕನುಂಗೊ ಅವರ ನಿವೃತ್ತಿಯೊಂದಿಗೆ ಮತ್ತೊಂದು ಅವಧಿಯ ವಿಸ್ತರಣೆ ಪಡೆಯುವ ನಿರೀಕ್ಷೆಗಳು ಕೊನೆಗೊಂಡಿವೆ. ಕನುಂಗೊ ಅವರು ಕರೆನ್ಸಿ ನಿರ್ವಹಣೆ, ಬಾಹ್ಯ ಹೂಡಿಕೆಗಳು, ಕಾರ್ಯಾಚರಣೆಗಳು, ಪಾವತಿ ಮತ್ತು ವಸಾಹತು ವ್ಯವಸ್ಥೆಯಲ್ಲಿ ಡೆಪ್ಯೂಟಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಹೇಶ್ ಕುಮಾರ್ ಜೈನ್, ಎಂ.ಡಿ.ಪತ್ರ ಮತ್ತು ರಾಜೇಶ್ವರ ರಾವ್ ಅವರು ಕೇಂದ್ರ ಬ್ಯಾಂಕ್​ನ ಇತರ ಡೆಪ್ಯೂಟ್ ಗವರ್ನರ್‌ಗಳಾಗಿದ್ದಾರೆ.

ಈ ಹಿಂದೆ ಮಾರ್ಚ್ 10ರಂದು ನಿಗದಿಯಾಗಿದ್ದ ಡೆಪ್ಯೂಟಿ ಗವರ್ನರ್ ಹುದ್ದೆಯ ಆರ್‌ಬಿಐ ಸಂದರ್ಶನ ರದ್ದುಗೊಳಿಸಲಾಗಿದೆ ಎಂಬ ವರದಿಗಳು ಬಂದಿದ್ದವು. ಇದು ಕನುಂಗೊಗೆ ವಿಸ್ತರಣೆ ಸಿಗಲಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು.

ABOUT THE AUTHOR

...view details