ಮುಂಬೈ:ಕೋವಿಡ್ ರೂಪಾಂತರಿ ಹರಡುತ್ತಿರುವ ನಡುವೆ ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಲು ಆರ್‌ಬಿಐ ನಿರ್ಧರಿಸಿದೆ ಎಂದುಎಸ್ಬಿಐ ಇಕೋವ್ರಾಪ್ ವರದಿ ಮಾಡಿದೆ.
ಇತ್ತೀಚೆಗೆ ಒಮಿಕ್ರಾನ್ ವೈರಸ್ ಹರಡುವಿಕೆ ಕಳವಳಕ್ಕೆ ಕಾರಣವಾಗಿದೆ. ಹಣಕಾಸು ನೀತಿ ಪರಾಮರ್ಶೆಯನ್ನು ಡಿಸೆಂಬರ್ 6-8ಕ್ಕೆ ನಿಗದಿಪಡಿಸಲಾಗಿದೆ. ಹಣಕಾಸು ನೀತಿ ಸಮಿತಿಯು (MPC)ಸಾಲ ದರಗಳನ್ನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಕೇಂದ್ರೀಯ ಬ್ಯಾಂಕ್‌ನ MPC ವಾಣಿಜ್ಯ ಬ್ಯಾಂಕುಗಳಿಗೆ ರೆಪೋ ದರ ಅಥವಾ ಅಲ್ಪಾವಧಿಯ ಸಾಲ ದರವನ್ನು ಶೇ.4ಕ್ಕೆ ಕಾಯ್ದುಕೊಂಡಿದೆ. ಪರಿಣಾಮವಾಗಿ, ರಿವರ್ಸ್ ರೆಪೋ ದರವನ್ನು ಈ ಹಿಂದೆ ಇದ್ದ ಶೇ. 3.35ರಷ್ಟೇ ನಿಗದಿ ಮಾಡಲಾಗಿದೆ.
ಆರ್‌ಬಿಐ ಅಕ್ಟೋಬರ್ ಪಾಲಿಸಿಯಿಂದ ಲಿಕ್ವಿಡಿಟಿ ಸಾಮಾನ್ಯೀಕರಣಕ್ಕೆ ಮುಂದಾಗಿದ್ದು, ಅಕ್ಟೋಬರ್ ಮೊದಲಿನ ನಿಗದಿತ ರೆಪೋ ದರವು 3.4 ಲಕ್ಷ ಕೋಟಿ ರೂಪಾಯಿಯಿಂದ 2.6 ಲಕ್ಷ ಕೋಟಿ ರೂಪಾಯಿಗೆ ಇಳಿಕೆ ಕಂಡಿದೆ. ಹೀಗಾಗಿ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರ ಏರಿಕೆ ಕುರಿತಂತೆ ಯಾವುದೇ ಮಾತುಕತೆ ನಡೆಯದೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ಆಗಾಗ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಬದಲಾವಣೆಯಲ್ಲಿ ತೊಡಗುತ್ತದೆ. ಒಂದು ವೇಳೆ ರಿವರ್ಸ್ ರೆಪೋ ದರದಲ್ಲಿನ ಹೆಚ್ಚಳವಾದರೆ ಹಣದ ಪೂರೈಕೆ ಕಡಿಮೆಯಾಗಲಿದೆ. ರಿವರ್ಸ್ ರೆಪೋ ದರದಲ್ಲಿ ಹೆಚ್ಚಳ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಹಣವನ್ನು ಆರ್‌ಬಿಐನಲ್ಲಿ ಇಡಲು ಹೆಚ್ಚಿನ ಉತ್ಸಾಹ ತೋರುತ್ತವೆ. ಈ ಹಣಕ್ಕೆ ಆರ್‌ಬಿಐ ಬಡ್ಡಿ ನೀಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ನಿಯಂತ್ರಣಕ್ಕೆ ಬರಲಿದೆ.
ಇದನ್ನೂ ಓದಿ:Tips to Home Loan Management: ಗೃಹಸಾಲದ ಇಎಂಐ ಹೊರೆಯನ್ನು ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್