ಕರ್ನಾಟಕ

karnataka

ETV Bharat / business

ಈ ಆ್ಯಪ್​ ಡೌನ್​ಲೋಡ್​ ಮಾಡಿದ್ರೆ ಬ್ಯಾಂಕ್​ ಖಾತೆ, E- ವ್ಯಾಲೆಟ್ ಹ್ಯಾಕ್​ ಪಕ್ಕಾ! ಆರ್​ಬಿಐನ ಎಚ್ಚರಿಕ್ಕೆ... - ರಿಮೋಟ್ ಡೆಸ್ಕ್‌ಟಾಪ್ ಆ್ಯಪ್

ಪ್ಲೇಸ್ಟೋರ್​ ಮತ್ತು ಆ್ಯಪ್​ ಸ್ಟೋರ್​ನಲ್ಲಿರುವ ಎನಿಡೆಸ್ಕ್​ ಅನ್ನು ಡೌನ್​ಲೋಡ್ ಮಾಡುವುದರಿಂದ ಅಪಾಯಗಳಿವೆ. ಹ್ಯಾಕರ್​ಗಳು ಈ ಆ್ಯಪ್​ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಗ್ರಾಹಕರ ಬ್ಯಾಂಕ್​ ಖಾತೆಗಳು ಹಾಗೂ ಇ-ವ್ಯಾಲೆಟ್‌ಗಳನ್ನು ದೋಚುತ್ತಿದ್ದಾರೆ ಎಂದು ಆರ್​ಬಿಐ ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ

By

Published : Aug 14, 2019, 2:10 PM IST

ನವದೆಹಲಿ:ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ), ಎನಿಡೆಸ್ಕ್ ಎಂಬ ರಿಮೋಟ್ ಡೆಸ್ಕ್‌ಟಾಪ್ ಆ್ಯಪ್ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇದು ಬಳಕೆದಾರರ ಬ್ಯಾಂಕಿಂಗ್​ ಮಾಹಿತಿಯನ್ನು ಕದಿಯುತ್ತಿದ್ದು ಡೌನ್​ಲೋಡ್​ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ.

ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇತರ ಬ್ಯಾಂಕ್​ಗಳ ಗ್ರಾಹಕರು ಯುಪಿಐ ಮೂಲಕ ಪಾವತಿ- ಸ್ವೀಕೃತಿ ಸೇವೆ ಪಡೆಯುವಾಗ ಎನಿಡೆಸ್ಕ್ ಆ್ಯಪ್ ಮೋಸಗೊಳಿಸುತ್ತಿದೆ ಎಂದು ದೂರು ನೀಡಿ ಬ್ಯಾಂಕ್​ಗಳ ಗಮನಕ್ಕೆ ತಂದಿದ್ದರು.

ಪ್ಲೇಸ್ಟೋರ್​ ಮತ್ತು ಆ್ಯಪ್​ ಸ್ಟೋರ್​ನಲ್ಲಿರುವ ಎನಿಡೆಸ್ಕ್​ ಅನ್ನು ಡೌನ್​ಲೋಡ್ ಮಾಡುವುದರಿಂದ ಅಪಾಯಗಳಿವೆ. ಹ್ಯಾಕರ್​ಗಳು ಈ ಆ್ಯಪ್​ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಗ್ರಾಹಕರ ಬ್ಯಾಂಕ್​ ಖಾತೆಗಳು ಹಾಗೂ ಇ-ವ್ಯಾಲೆಟ್‌ಗಳನ್ನು ದೋಚುತ್ತಿದ್ದಾರೆ ಎಂದು ಆರ್​ಬಿಐ ಎಚ್ಚರಿಸಿದೆ.

ಎನಿಡೆಸ್ಕ್‌ ಒಂದು ರಿಮೋಟ್‌ ನಿಯಂತ್ರಿತ ಅಪ್ಲಿಕೇಷನ್‌. ಒಂದು ಪ್ರದೇಶದಲ್ಲಿರುವ ಕಂಪ್ಯೂಟರ್‌ ಅಥವಾ ಇತರೆ ಸಾಧನದಲ್ಲಿನ ಸಮಸ್ಯೆ ಸರಿಪಡಿಸಲು ಇನ್ನೆಲ್ಲೋ ಇರುವ ತಜ್ಞರು ಕಂಟ್ರೋಲ್‌ ಪಡೆಯಲು ಈ ತಂತ್ರಾಂಶ ಸಹಾಯಕವಾಗುತ್ತದೆ. ಈಗ ಇದೇ ಆ್ಯಪ್​ ಹ್ಯಾಕರ್‌ಗಳು ಗ್ರಾಹಕರ ಖಾತೆಗೆ ಕನ್ನಾ ಹಾಕಲು ಬಳಸಿಕೊಳ್ಳುತ್ತಿದ್ದಾರೆ.

ಎನಿಡೆಸ್ಕ್​​ ಡೌನ್‌ಲೋಡ್‌ ಮಾಡಿಕೊಂಡ ಮೇಲೆ ಆ್ಯಪ್ ನೀಡುವ 9 ಅಂಕಿಗಳ ಕೋಡ್​ ಅನ್ನು ಕಳುಹಿಸುವಂತೆ ಗ್ರಾಹಕರನ್ನು ಹ್ಯಾಕರ್‌ಗಳು ದುಂಬಾಲು ಬೀಳುತ್ತಾರೆ. ಆ ನಂಬರ್ ಸಿಕ್ಕ ಬಳಿಕ ಗ್ರಾಹಕರ ಸಾಧನದ ಮೇಲೆ ನಿಯಂತ್ರಣ ಸಾಧಿಸುವ ಹ್ಯಾಕರ್​ಗಳು ಬ್ಯಾಂಕ್​ ಖಾತೆ ಹಾಗೂ ಇ- ವ್ಯಾಲೆಟ್​ಗಳಿಗೆ ಕನ್ನಾ ಹಾಕುತ್ತಾರೆ ಎಂದು ಆರ್​ಬಿಐ ವಿವರಿಸಿದೆ.

ABOUT THE AUTHOR

...view details