ನವದೆಹಲಿ: ಈ ವಾರ ಬಿಡುಗಡೆಯಾಗಲಿರುವ ಸ್ಥೂಲ ಆರ್ಥಿಕ ದತ್ತಾಂಶಗಳು (ಮ್ಯಾಕ್ರೊ ಎಕನಾಮಿಕ್ ಡೇಟಾ), ವಾಹನ ಮಾರಾಟ ಮತ್ತು ಆರ್‌ಬಿಐ ನೀತಿ ಹಿನ್ನೆಲೆ ಈ ವಾರದ ಷೇರು ಮಾರುಕಟ್ಟೆಗೆ ಮತ್ತಷ್ಟು ಬಲ ಬರಲಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.
ಈ ವಾರ ಏರಿಕೆ ಕಾಣುವುದ ಷೇರು ಮಾರುಕಟ್ಟೆ? - ಮ್ಯಾಕ್ರೊಎಕನಾಮಿಕ್ ಡೇಟಾ
ಕಳೆದ ವಾರದಲ್ಲಿ ಸೆನ್ಸೆಕ್ಸ್ 267.47 ಪಾಯಿಂಟ್ ಅಥವಾ ಶೇ. 0.60 ರಷ್ಟು ಮುನ್ನಡೆ ಸಾಧಿಸಿದ್ದು, ಈ ವಾರದ ಷೇರು ಮಾರುಕಟ್ಟೆಗೆ ಮತ್ತಷ್ಟು ಬಲ ಬರಲಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.
'ಗುರುನಾನಕ್ ಜಯಂತಿ' ಹಿನ್ನೆಲೆ ಇಂದು ಕೆಲ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಆದರೂ ಸಹ ಮಾರುಕಟ್ಟೆಯ ಒಟ್ಟಾರೆ ರಚನೆಯು ಸಕಾರಾತ್ಮಕವಾಗಿ ಉಳಿದಿದೆ. ಆರ್‌ಬಿಐನ ಎಂಪಿಸಿ ಸಭೆ ಈ ವಾರ ನಿಗದಿಯಾಗಿದ್ದು, ಮಹತ್ವದ ವಿಷಯಗಳಾದ ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆ ಮತ್ತು ವಿದೇಶಿ ನಿಧಿಯ ಒಳಹರಿವಿನ ಕುರಿತು ಚರ್ಚೆ ನಡೆಸಲಾಗುತ್ತದೆ.
ಕಳೆದ ವಾರದಲ್ಲಿ ಸೆನ್ಸೆಕ್ಸ್ 267.47 ಪಾಯಿಂಟ್ ಅಥವಾ ಶೇ. 0.60ರಷ್ಟು ಮುನ್ನಡೆ ಸಾಧಿಸಿದ್ದು, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷಿತ ವೇಗಕ್ಕಿಂತ ಹೆಚ್ಚು ಚೇತರಿಸಿಕೊಂಡಿದೆ. ಗ್ರಾಹಕರ ಬೇಡಿಕೆ ಮತ್ತೆ ಪುಟಿಯುವ ಭರವಸೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.