ಹೈದರಾಬಾದ್ :ಬ್ಯಾಂಕ್ಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಆರ್‌ಬಿಐನ ಆಂತರಿಕ ಕಾರ್ಯ ಗುಂಪು (ಐಡಬ್ಲ್ಯುಜಿ) ಕೆಲವು ಮಾರ್ಗಸೂಚಿಗಳನ್ನೊಳಗೊಂಡ ವರದಿಯನ್ನು ಆರ್‌ಬಿಐಗೆ ಸಲ್ಲಿಸಿದೆ. ಈ ವರದಿಯೂ ಮಾಜಿ ಕೇಂದ್ರೀಯ ಬ್ಯಾಂಕರ್‌ಗಳು, ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳ ಟೀಕೆಗೆ ಗುರಿಯಾಗಿದೆ.
ನವೆಂಬರ್ 20 ರಂದು ಪಿ ಕೆ ಮೊಹಂತಿ ನೇತೃತ್ವದ ಅಧಿಕಾರಿಗಳ ತಂಡ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತಂದು, ದೊಡ್ಡ ಕಾರ್ಪೊರೇಟ್/ಕೈಗಾರಿಕಾ ಸಂಸ್ಥೆಗಳು, ಬ್ಯಾಂಕ್ಗಳನ್ನು ಸ್ಥಾಪಿಸಲು ಅನುಮತಿ ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ಗೆ ಶಿಫಾರಸು ಮಾಡಿದೆ.
“ಕೈಗಾರಿಕಾ ಸಂಸ್ಥೆಗಳಿಗೆ ಹಣಕಾಸು ಅಗತ್ಯವಿರುತ್ತದೆ ಮತ್ತು ಅವರು ಅದನ್ನು ಸುಲಭವಾಗಿ ಪಡೆಯಬಹುದು. ಹೌಸ್ ಬ್ಯಾಂಕ್ ಸಾಲಗಾರನ ಒಡೆತನದಲ್ಲಿದ್ದಾಗ ಉತ್ತಮ ಸಾಲವನ್ನು ಹೇಗೆ ಪಡೆಯಬಹುದು?” ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಆರ್‌ಬಿಐ ಮಾಜಿ ಉಪ ಗವರ್ನರ್ ವೈರಲ್ ಆಚಾರ್ಯ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.