ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ರೇಟ್ನಲ್ಲಿ ಯಾವುದೇ ಬದಲಾವಣೆ ಮಾಡದೇ, ಶೇಕಡಾ 5.15ರಷ್ಟನ್ನೇ ಉಳಿಸಿಕೊಂಡಿದೆ. ಇದು ಕಳೆದ 10 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.
ಜೊತೆಗೆ ರಿವರ್ಸ್ ರೆಪೋ ರೇಟ್ ಕೂಡಾ ಶೇಕಡಾ 4.90ರಷ್ಟೇ ಇದ್ದು, ಯಾವುದೇ ಬದಲಾವಣೆ ಮಾಡಿಲ್ಲ.
ಯೂನಿಯನ್ ಬಜೆಟ್ ಪ್ರಸ್ತುತಿಯ ನಂತರ ಇಂದು ನಡೆದ ತನ್ನ ಮೊದಲ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ರೇಟ್ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.
ವಿತ್ತೀಯ ನೀತಿ ಸಮಿತಿಯ ಎಲ್ಲ ಆರು ಸದಸ್ಯರು ರೆಪೋ ರೇಟ್ನ ಯಥಾಸ್ಥಿತಿ ಕಾಯ್ದುಕೊಳ್ಳವ ಪರವಾಗಿ ಮತ ಚಲಾಯಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಣಕಾಸು ನೀತಿ ಸಮಿತಿ ಸಭೆ ಇದಾಗಿದೆ.
ಫೆಬ್ರವರಿ 2019ರಿಂದ ಫೆಬ್ರವರಿ 2020ರವರೆಗಿನ ರೆಪೋ ರೇಟ್ ರೆಪೋ ರೇಟ್ ಎಂದರೇನು?:ದೇಶದ ವಾಣಿಜ್ಯ ಬ್ಯಾಂಕ್ಗಳು ತಮ್ಮಲ್ಲಿ ಹಣದ ಕೊರತೆಯುಂಟಾದಾಗ ಆರ್ಬಿಐನಿಂದ ಹಣ ಪಡೆಯುತ್ತವೆ. ವಾಣಿಜ್ಯ ಬ್ಯಾಂಕ್ಗಳಿಗೆ ಆರ್‌ಬಿಐ ಕೊಡುವ ಸಾಲದ ಮೆಲಿನ ಬಡ್ಡಿ ದರವೇ ರೆಪೋರೇಟ್.
ಇನ್ನು 2020-21 ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಸೂಚ್ಯಂಕವನ್ನು ಶೇಕಡಾ 6 ಎಂದು ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡಾ 5.5 ರಿಂದ 6.0 ಮತ್ತು ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಶೇಕಡಾ 6.2 ಎಂದು ಅಂದಾಜು ಮಾಡಲಾಗಿದೆ. ಬೇಡಿಕೆಯ ಕುಸಿತ ಸೇರಿದಂತೆ ಹಲವು ಜಾಗತಿಕ ಅಂಶಗಳ ಕಾರಣಗಳಿಂದಾಗಿ ಜಿಡಿಪಿ ನಿಧಾನಗತಿಯಲ್ಲಿ ಬೆಳೆವಣಿಗೆ ಆಗಲಿದೆ ಎಂದು ಅಂದಾಜಿಸಲಾಗಿದೆ.