ಕರ್ನಾಟಕ

karnataka

ETV Bharat / business

ಕ್ರೆಡಿಟ್​,ಡೆಬಿಟ್​ ಕಾರ್ಡ್​ದಾರರೇ ಗಮನಿಸಿ: ಆರ್​ಬಿಐನ ಖಡಕ್​ ಸೂಚನೆ, ಸೇವೆಯಲ್ಲಿ ಮಹತ್ವದ ಬದಲಾವಣೆ - ಕ್ರೆಡಿಟ್ ಕಾರ್ಡ್

ಕಾರ್ಡ್ ವಿತರಣೆ/ ಮರುಹಂಚಿಕೆಯಲ್ಲಿಯೇ ಭಾರತದಲ್ಲಿನ ಎಟಿಎಂ ಮತ್ತು ಪಿಒಎಸ್ ಕೇಂದ್ರಗಳಲ್ಲಿ ದೇಶಿಯ ಕಾರ್ಡ್ ವಹಿವಾಟುಗಳಿಗೆ ಮಾತ್ರ ಅನುಮತಿಸುವಂತೆ ಆರ್‌ಬಿಐ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಆನ್‌ಲೈನ್ ವಹಿವಾಟುಗಳು, ಕಾರ್ಡ್​ರಹಿತ ವ್ಯವಹಾರಗಳು ಮತ್ತು ಸಂಪರ್ಕವಿಲ್ಲದ ವಹಿವಾಟುಗಳಿಗಾಗಿ ಗ್ರಾಹಕರ ಕಾರ್ಡ್‌ಗಳನ್ನು ಪ್ರತ್ಯೇಕವಾದ ಸೇವೆಗಳನ್ನು ಹೊಂದಿಸಬೇಕಾಗುತ್ತದೆ.

Credit card
ಕ್ರೆಡಿಟ್ ಕಾರ್ಡ್​

By

Published : Jan 16, 2020, 10:20 PM IST

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ), ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳನ್ನು ಬಳಕೆದಾರರ ಸ್ನೇಹಿ ಹಾಗೂ ಇನ್ನಷ್ಟು ಸುರಕ್ಷತೆ ಒದಗಿಸಲು ಬ್ಯಾಂಕ್​ಗಳಿಗೆ ಹೊಸ ನಿಯಮ ಹೊರಡಿಸಿದೆ.

ಕಾರ್ಡ್ ವಿತರಣೆ/ ಮರುಹಂಚಿಕೆಯಲ್ಲಿಯೇ ಭಾರತದಲ್ಲಿನ ಎಟಿಎಂ ಮತ್ತು ಪಿಒಎಸ್ ಕೇಂದ್ರಗಳಲ್ಲಿ ದೇಶಿಯ ಕಾರ್ಡ್ ವಹಿವಾಟುಗಳಿಗೆ ಮಾತ್ರ ಅನುಮತಿಸುವಂತೆ ಆರ್‌ಬಿಐ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ.

ಅಂತಾರಾಷ್ಟ್ರೀಯ ಹಾಗೂ ಆನ್‌ಲೈನ್ ವಹಿವಾಟುಗಳು, ಕಾರ್ಡ್​ರಹಿತ ವ್ಯವಹಾರಗಳು ಮತ್ತು ಸಂಪರ್ಕವಿಲ್ಲದ ವಹಿವಾಟುಗಳಿಗಾಗಿ ಗ್ರಾಹಕರ ಕಾರ್ಡ್‌ಗಳನ್ನು ಪ್ರತ್ಯೇಕವಾದ ಸೇವೆಗಳನ್ನು ಹೊಂದಿಸಬೇಕಾಗುತ್ತದೆ. ಆನ್‌ಲೈನ್/ ಅಂತಾರಾಷ್ಟ್ರೀಯ/ ಸಂಪರ್ಕವಿಲ್ಲದ ವಹಿವಾಟುಗಳಿಗೆ ಎಂದಿಗೂ ಬಳಸದ ಅಸ್ತಿತ್ವದಲ್ಲಿರುವ ಕಾರ್ಡ್‌ಗಳನ್ನು ಕಡ್ಡಾಯವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.

ಹೊಸ ಕಾರ್ಡ್‌ಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ. ಹಳೆಯ ಕಾರ್ಡ್‌ಗಳನ್ನು ಹೊಂದಿರುವವರು ಯಾವುದೇ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ. ಮೊಬೈಲ್ ಅಪ್ಲಿಕೇಷನ್/ ಇಂಟರ್​ನೆಟ್ ಬ್ಯಾಂಕಿಂಗ್/ ಎಟಿಎಂ/ ಇಂಟರ್​ ಆಕ್ಟಿವ್​ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಸೇರಿದಂತೆ ಲಭ್ಯವಿರುವ ಎಲ್ಲಾ ಚಾನಲ್‌ಗಳ ಮೂಲಕ ಬಳಕೆದಾರರು ಚಾಲನೆ ಅಥವಾ ನಿಷ್ಕ್ರಿಯಗೊಳಿಸಲು ಅಥವಾ ಎಲ್ಲ ವಹಿವಾಟು ಮಿತಿಗಳನ್ನು ಬದಲಾಯಿಸಲು 24x7 ಸೇವೆ ನೀಡಬೇಕು ಎಂದು ಆದೇಶಿಸಿದೆ.

ABOUT THE AUTHOR

...view details