ಮುಂಬೈ:ವಿವಿಧ ಷರತ್ತುಗಳಿಗೆ ಒಳಪಟ್ಟು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳನ್ನು (ಡಿಸಿಸಿಬಿ) ರಾಜ್ಯ ಸಹಕಾರಿ ಬ್ಯಾಂಕ್ಗಳ (ಎಸ್‌ಟಿಸಿಬಿ) ಜತೆಗೆ ವಿಲೀನ ಪ್ರಕ್ರಿಯೆ ಪರಿಗಣಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸಬೇಕಿದೆ.
2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2021ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಎಸ್‌ಟಿಸಿಬಿ ಮತ್ತು ಡಿಸಿಸಿಬಿಗಳಿಗೆ ಸೂಚಿಸಲಾಗಿದೆ. ಬ್ಯಾಂಕ್ಗಳ ವಿಲೀನವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಲಿದೆ.
ಎರಡು ಹಂತದ ಅಲ್ಪಾವಧಿಯ ಸಹಕಾರ ಕ್ರೆಡಿಟ್ ರಚನೆಯಾಗಿ (ಎಸ್‌ಟಿಸಿಸಿಎಸ್) ಡಿಸಿಸಿಬಿಗಳನ್ನು ಎಸ್‌ಟಿಸಿಬಿಗಳ ಜತೆಗೆ ಸಂಯೋಜಿಸಲು ಕೆಲವು ರಾಜ್ಯ ಸರ್ಕಾರಗಳು ಕೋರಿದ ನಂತರ ಆರ್‌ಬಿಐ ಹೊಸ ಮಾರ್ಗಸೂಚಿಗಳನ್ನು ಹೊರ ತಂದಿದೆ.
ಕಾನೂನು ಚೌಕಟ್ಟಿನ ವಿವರವಾದ ಅಧ್ಯಯನ ನಡೆಸಿದ ನಂತರ ರಾಜ್ಯದ ಒಂದು ಅಥವಾ ಹೆಚ್ಚಿನ ಡಿಸಿಸಿಬಿಗಳನ್ನು ಎಸ್‌ಟಿಸಿಬಿಯೊಂದಿಗೆ ಸಂಯೋಜಿಸುವ ಪ್ರಸ್ತಾಪಸಿದಾಗ ವಿಲೀನದ ಪ್ರಸ್ತಾಪ ಪರಿಗಣಿಸುತ್ತದೆ ಎಂದು ಆರ್‌ಬಿಐ ಹೇಳಿದೆ.
ಹೆಚ್ಚುವರಿ ಬಂಡವಾಳ ತಂತ್ರ, ಅಗತ್ಯ ಹಣಕಾಸಿನ ನೆರವಿನ ಭರವಸೆ, ಸ್ಪಷ್ಟ ಲಾಭದಾಯಕತೆ ಜತೆಗೆ ಯೋಜಿತ ವ್ಯವಹಾರದ ಮಾದರಿ ಮತ್ತು ಸಂಯೋಜಿತ ಬ್ಯಾಂಕ್ನ ಪ್ರಸ್ತಾವಿತ ಆಡಳಿತದ ಮಾದರಿ ಕೂಡ ಪ್ರಸ್ತಾಪಿಸಿರಬೇಕು.
ವಿಲೀನದ ಯೋಜನೆಯನ್ನು ಅಗತ್ಯವಾದ ಬಹುಪಾಲು ಷೇರುದಾರರು ಅನುಮೋದಿಸಬೇಕಾಗಿದೆ. ಅಲ್ಲದೇ, ನಬಾರ್ಡ್ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಮತ್ತು ಶಿಫಾರಸು ಮಾಡಬೇಕು.
ಡಿಸಿಸಿಬಿಗಳನ್ನು ಎಸ್‌ಟಿಸಿಬಿಯೊಂದಿಗೆ ಜೋಡಿಸುವ ಪ್ರಸ್ತಾಪವನ್ನು ರಿಸರ್ವ್ ಬ್ಯಾಂಕ್ ನಬಾರ್ಡ್‌ನೊಂದಿಗೆ ಸಮಾಲೋಚಿಸಿ ಪರಿಶೀಲನೆ ಮತ್ತು ಅನುಮೋದನೆಯಂತಹ ಎರಡು ಹಂತದ ಪ್ರಕ್ರಿಯೆ ಒಳಗೊಂಡಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ.