ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಕೇಂದ್ರ ಬ್ಯಾಂಕ್ನಿಂದ ಧನಸಹಾಯ ಪಡೆದುಕೊಳ್ಳದೇ ಅಥವಾ ಸ್ವಂತ ಸಂಪನ್ಮೂಲಗಳನ್ನು ನಿಯೋಜಿಸಿಕೊಳ್ಳುವಂತಹ ವಿಶೇಷ ಲಿಕ್ವಿಡಿಟಿ ಸೌಲಭ್ಯ (ಎಸ್ಎಲ್ಎಫ್-ಎಂಎಫ್) ಯೋಜನೆಯ ನಿಯಂತ್ರಕ ಪ್ರಯೋಜನಗಳನ್ನು ತನ್ನ ಎಲ್ಲ ಅಧೀನ ಬ್ಯಾಂಕ್ಗಳಿಗೆ ವಿಸ್ತರಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್ಗಳ ಮೇಲಿನ ಲಿಕ್ವಿಡಿಟಿ ಒತ್ತಡ ಸುಗಮಗೊಳಿಸಲು ಆರ್ಬಿಐ, ಕೆಲ ದಿನಗಳ ಹಿಂದೆಯಷ್ಟೇ 50 ಸಾವಿರ ಕೋಟಿ ರೂ. ವಿಶೇಷ ಲಿಕ್ವಿಡಿಟಿ ಸೌಲಭ್ಯ ಪ್ರಕಟಿಸಿತ್ತು.
ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಕಂಪನಿ, ತನ್ನ ಸಾಲದ ಸಮಸ್ಯೆಗಳಿಂದಾಗಿ ಆರು ಆದಾಯ ಸಾಲದ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು. ಮ್ಯೂಚುವಲ್ ಫಂಡ್ ಮಾರುಕಟ್ಟೆ ಸ್ಥಿರತೆಗಾಗಿ ಆರ್ಬಿಐ, ಎಸ್ಎಲ್ಎಫ್-ಎಂಎಫ್ ನಿಧಿ ಘೋಷಿಸಿತ್ತು.
ಸಾಲಗಳನ್ನು ವಿಸ್ತರಿಸುವ ಮೂಲಕ ಮ್ಯೂಚುವಲ್ ಫಂಡ್ಗಳ ದ್ರವ್ಯತೆಯ ಅವಶ್ಯಕತೆಗಳನ್ನು ಎಲ್ಲಾ ಬ್ಯಾಂಕ್ಗಳು ಪೂರೈಸುತ್ತದೆ ಎಂಬುದನ್ನು ಈಗ ತೀರ್ಮಾನಿಸಲಾಗಿದೆ. ಹೂಡಿಕೆ ದರ್ಜೆಯ ಕಾರ್ಪೊರೇಟ್ ಬಾಂಡ್, ವಾಣಿಜ್ಯ ಪೇಪರ್ (ಸಿಪಿಎಸ್), ಡಿಬೆಂಚರ್ ಮತ್ತು ಠೇವಣಿಯ ಪ್ರಮಾಣ ಪತ್ರಗಳು (ಸಿಡಿಎಸ್) ಮೇಲಾಧಾರ (ಕೊಲ್ಯಾಟರಲ್) ವಿರುದ್ಧ ಎಂಎಫ್ಗಳನ್ನು ಖರೀದಿಸಲು ಆರ್ಬಿಐನಿಂದ ಮರಳಿ ಧನಸಹಾಯ ಪಡೆದುಕೊಳ್ಳುವ ಅಗತ್ಯವಿಲ್ಲ. ಎಸ್ಎಲ್ಎಫ್-ಎಂಎಫ್ ಯೋಜನೆಯಡಿಯಲ್ಲಿ ಲಭ್ಯವಿರುವ ಎಲ್ಲಾ ನಿಯಂತ್ರಕ ಪ್ರಯೋಜನಗಳನ್ನು ಕ್ಲೇಮ್ ಮಾಡಲು ಬ್ಯಾಂಕ್ಗಳು ಅರ್ಹರಾಗಿರುತ್ತಾರೆ.