ನವದೆಹಲಿ:ರೀಚಾರ್ಜ್, ಒಟಿಟಿ, ಡಿಟಿಎಚ್ ಮತ್ತು ಯುಟಿಲಿಟಿ ಬಿಲ್ ಸೇರಿದಂತೆ ವಿವಿಧ ಸೇವೆಗಳಿಗೆ ಗ್ರಾಹಕರು ಸ್ವಯಂಚಾಲಿತ ಮರುಪಾವತಿಯ ಹೆಚ್ಚುವರಿ ನಿಯಮ ಅನುಷ್ಠಾನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದೂಡಿಕೆ ಮಾಡಿದೆ.
ಸ್ವಯಂಚಾಲಿತ ಪಾವತಿಗಳಿಗೆ ಹೆಚ್ಚುವರಿ ಪ್ರಮಾಣೀಕರಣ (ಎಎಫ್‌ಎ) ಕಡ್ಡಾಯಗೊಳಿಸುವ ಹೊಸ ಮಾರ್ಗಸೂಚಿಗಳ ಜಾರಿಯನ್ನು ಈ ವರ್ಷದ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಇದನ್ನು ಆರ್‌ಬಿಐ ಬುಧವಾರ ಬಹಿರಂಗಪಡಿಸಿದೆ.
ಸ್ವಯಂಚಾಲಿತ ಮರುಕಳಿಸುವ ಪಾವತಿಗಳಿಗಾಗಿ ಗ್ರಾಹಕರಿಂದ ಹೆಚ್ಚುವರಿ ಪ್ರಮಾಣೀಕರಣ ಕಡ್ಡಾಯಗೊಳಿಸುವಂತೆ ಆರ್‌ಬಿಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕಳೆದ ವರ್ಷ ಡಿಸೆಂಬರ್ 4ರಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆರ್‌ಆರ್‌ಬಿಗಳು, ಎನ್‌ಬಿಎಫ್‌ಸಿಗಳು ಮತ್ತು ಪಾವತಿ ಗೇಟ್‌ವೇಗಳು ಸೇರಿದಂತೆ ಬ್ಯಾಂಕ್ಗಳಿಗೆ ಮಾರ್ಚ್ 31ರ ನಂತರ ಎಎಫ್‌ಎಗೆ (ಹೆಚ್ಚುವರಿ ಅಂಶದ ದೃಢೀಕರಣ) ಒಳಪಟ್ಟು ಕಾರ್ಡ್, ಪ್ರಿಪೇಯ್ಡ್ ಪಾವತಿ ವಿಧಾನ ಮತ್ತು ಯುಪಿಐಗಳನ್ನು ಬಳಸಿಕೊಂಡ ಪಾವತಿಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿತ್ತು.