ಮುಂಬೈ: ಹೆಚ್ಚುತ್ತಿರುವ ಅನಧಿಕೃತ ಡಿಜಿಟಲ್ ಸಾಲ ಪ್ಲಾಟ್‌ಫಾರ್ಮ್ ಮತ್ತು ಮೊಬೈಲ್ ಅಪ್ಲಿಕೇಷನ್‌ಗಳಿಗೆ ಬಲಿಯಾಗದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಅನೇಕ ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳು ಅನಧಿಕೃತ ಪ್ಲಾಟ್‌ಫಾರ್ಮ್ ಮತ್ತು ಅಪ್ಲಿಕೇಷನ್‌ಗಳಿಗೆ ಬಲಿಯಾಗುತ್ತಿರುವ ಬಗ್ಗೆ ವರದಿಗಳು ಆರ್‌ಬಿಐ ಗಮನಕ್ಕೆ ಬಂದಿವೆ. ಅವು ತ್ವರಿತ ಮತ್ತು ತೊಂದರೆಯಿಲ್ಲದ ಸಾಲ ನೀಡುವ ಭರವಸೆ ನೀಡುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.
ಅತಿಯಾದ ಬಡ್ಡಿ ದರಗಳು ಮತ್ತು ಹೆಚ್ಚುವರಿ ಗುಪ್ತ ಶುಲ್ಕಗಳನ್ನು ಸಾಲಗಾರರಿಂದ ಬೇಡಿಕೆಯಿಡುತ್ತವೆ. ಇದು ಸ್ವೀಕಾರಾರ್ಹವಲ್ಲದ ನಡೆಯಾಗಿದೆ. ತ್ವರಿತ ಸಾಲ ನೀಡುವ ಅನಧಿಕೃತ ಪ್ಲಾಟ್ಫಾರ್ಮ್ಗಳು ಹೆಚ್ಚಿನ ಬಡ್ಡಿ ದರ ಹಾಗೂ ಶುಲ್ಕಗಳನ್ನು ವಿಧಿಸುತ್ತವೆ. ಅಲ್ಲದೆ ಸಾಲಗಾರರ ಮೊಬೈಲ್ ಫೋನ್‌ಗಳಲ್ಲಿ ಡೇಟಾ ಪ್ರವೇಶಿಸುವ ಮೂಲಕ ಒಪ್ಪಂದಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದಿದೆ.