ಮುಂಬೈ:ದಿವಾಳಿ ಹಾದಿ ಹಿಡಿದು ಬಿಕ್ಕಟ್ಟಿಗೆ ಸಿಲುಕಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಅನ್ನು ಸ್ವಾಧೀನಪಡಿಸಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಾತ್ವಿಕ ಅನುಮೋದನೆ ನೀಡಿದೆ. ಈ ಹಿನ್ನೆಲೆ ಈ ಬ್ಯಾಂಕ್ ಸ್ವಾಧೀನಕ್ಕಾಗಿ ಕಾಯುತ್ತಿರುವ ‘ಸೆಂಟ್ರಂ ಫೈನಾನ್ಷಿಯಲ್ ಲಿಮಿಟೆಡ್’ಗೆ ಕಿರು ಹಣಕಾಸು ಬ್ಯಾಂಕ್ ತೆರೆಯಲು ಅನುಮೋದನೆ ಸಿಕ್ಕಿದೆ.
ನವೆಂಬರ್ 3, 2020ರಂದು ಪಿಎಂಸಿ ಬ್ಯಾಂಕ್ ಲಿಮಿಟೆಡ್ ಪ್ರಕಟಿಸಿದ್ದ ಅಧಿಸೂಚನೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 1,2021ರಂದು ಸೆಂಟ್ರಂ ಫೈನಾನ್ಷಿಯಲ್ ಲಿಮಿಟೆಡ್ ಸಲ್ಲಿಸಿರುವ ಬ್ಯಾಂಕ್ ಆರಂಭ ಸಂಬಂಧಿತ ಮನವಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಪಿಎಂಸಿ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಲು ನಾಲ್ಕು ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಮುಖ್ಯವಾಗಿ ಸೆಂಟ್ರಂ ಫೈನಾನ್ಶಿಯಲ್ ಸರ್ವಿಸಸ್ ಕೂಡ ಒಂದಾಗಿದೆ.